
ಮಣಿಪಾಲ: ಉಡುಪಿ ಜಿಲ್ಲೆಯ ಮಣಿಪಾಲದ ಬಳಿ ಒಬ್ಬ ವ್ಯಕ್ತಿ ಮನೆಯಲ್ಲಿ ನೇಣಿಗೇರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸತ್ತ ವ್ಯಕ್ತಿಯ ಹೆಸರು ರಮೇಶ್ ನಾಯ್ಕ ಎಂದು ಗೊತ್ತಾಗಿದೆ.
ಘಟನೆಯ ವಿವರ: ದೂರದಾರಿ ಸರೋಜ (47), ಹೆರ್ಗಾ ಗ್ರಾಮ, ಉಡುಪಿ ಇವರ ಪತಿ ರಮೇಶ್ ನಾಯ್ಕ (ವಯಸ್ಸು 48) ಕಿಡ್ನಿ ರೋಗದಿಂದ ಬಳಲುತ್ತಿದ್ದರು. ಅವರು ಮನೆಯಲ್ಲೇ ಇರುತ್ತಿದ್ದರು. 02.08.2025 ರಂದು ಬೆಳಿಗ್ಗೆ 10:00 ರಿಂದ 10:30 ರ ನಡುವೆ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ UDR ಪ್ರಕರಣ ಸಂಖ್ಯೆ 29/2025, ಕಲಂ: 194 BNSS ಅಡಿಯಲ್ಲಿ ದಾಖಲಾಗಿದೆ.