August 6, 2025
20250530_123159-600x800

ಮಂಗಳೂರು ತಾಲೂಕಿನಲ್ಲಿ ಭಾರಿ ಮಳೆಯ ಅಬ್ಬರ: ಭೂಕುಸಿತದಿಂದ ಇಬ್ಬರ ದುರ್ಮರಣ

ಮಂಗಳೂರು ತಾಲ್ಲೂಕಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದೇರಳಕಟ್ಟೆಯ ಮೊಂಟೆಪದವುವಲ್ಲಿ ಭೂಕುಸಿತ ಸಂಭವಿಸಿದ್ದು, ಪರಿಣಾಮವಾಗಿ ಫಾತಿಮಾ ನಯೀಮ್ ಎಂಬ 7 ವರ್ಷದ ಬಾಲಕಿ ಹಾಗೂ ಪ್ರೇಮ ಕುಮಾರಿ (ವಯಸ್ಸು 58) ಎಂಬ ಮಹಿಳೆ ಮೃತಪಟ್ಟಿದ್ದಾರೆ.

ಜೋಕಟ್ಟೆ ಗ್ರಾಮ ಪಂಚಾಯತ್ ಹತ್ತಿರವೂ ಭೂಕುಸಿತ ಸಂಭವಿಸಿದ್ದು, ಕೆಲವು ಮನೆಗಳು ಅಪಾಯದ ಸ್ಥಿತಿಯಲ್ಲಿವೆ. ಉಳ್ಳಾಲ ತಾಲೂಕಿನಲ್ಲಿ ಎರಡು ವಿಭಿನ್ನ ಕಡೆ ಮನೆಗಳ ಮೇಲೆ ಗುಡ್ಡ ಕುಸಿದಿದ್ದು, ಘಟನೆಯಲ್ಲಿ ಐವರು ಸಿಲುಕಿದ್ದರು. ಅವರಲ್ಲಿ ಇಬ್ಬರನ್ನು ರಕ್ಷಿಸಲಾಗಿದ್ದು, ಉಳಿದ ಮೂವರಿಗಾಗಿ ರಕ್ಷಣಾ ಕಾರ್ಯ ನಡೆಯುತ್ತಿದೆ.

ದೇರಳಕಟ್ಟೆಯ ಘಟನೆಯಲ್ಲಿ ಕಂಪೌಂಡ್ ಗೋಡೆ ಮನೆ ಮೇಲೆ ಕುಸಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಫಾತಿಮಾ ನಯೀಮ್ ಅವರನ್ನು ತಕ್ಷಣದ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ವಿಧಿವಶಳಾದಳು.

ಈ ಘಟನೆಯು ಮಳೆಯ ಅಬ್ಬರದಿಂದ ಉಂಟಾಗಬಹುದಾದ ಭೀಕರ ಪರಿಣಾಮಗಳನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ನಿರಂತರ ಮಳೆಗೆ ತತ್ತರಿಸುತ್ತಿರುವ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.

error: Content is protected !!