August 6, 2025
picture-indian-bidi-white-background-picture-indian-bidi-isolated-white-background-picture-indian-bidi-148392672

ಮಂಗಳೂರಿನಲ್ಲಿ ದುರ್ಘಟನೆ: ಬೀಡಿ ತುಂಡು ನುಂಗಿದ ಮಗು ದುರ್ಮರಣದ ಶಿಕಾರ

ಮಂಗಳೂರು: ಅಡ್ಯಾರ್ ಪ್ರದೇಶದಲ್ಲಿ ಮಗು ಬೀಡಿ ತುಂಡು ನುಂಗಿ ದುರ್ಮರಣಕ್ಕೀಡಾಗಿರುವ ದಾರುಣ ಘಟನೆ ನಡೆದಿದೆ. ಬಿಹಾರ ಮೂಲದ ದಂಪತಿಯ ಪುತ್ರ ಅನೀಶ್ ಎಂಬ ఏడೂವರೆ ತಿಂಗಳ ಮಗುವು ಈ ದುರ್ಘಟನೆಯ ಬಲಿಯಾಗಿದ್ದಾನೆ.

ಮನೆಯ ನೆಲದಲ್ಲಿ ಬಿದ್ದಿದ್ದ ಬೀಡಿ ತುಂಡನ್ನು ನುಂಗಿದ ಮಗುವು ತಕ್ಷಣವೇ ಅಸ್ವಸ್ಥಗೊಂಡು ಶ್ವಾಸಕೋಶದಲ್ಲಿ ತೊಂದರೆಯುಂಟಾಯಿತು. ತಕ್ಷಣವೇ ಮಗುವನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಎಲ್ಲಾ ಪ್ರಯತ್ನಗಳಿಗೂ ಚಿಕಿತ್ಸೆ ಫಲಕಾರಿಯಾಗದೆ ಮಗು ಕೊನೆಯುಸಿರೆಳೆದಿದೆ.

ಈ ಸಂಬಂಧ ಮಗುವಿನ ತಾಯಿ ಲಕ್ಷ್ಮಿದೇವಿ ಠಾಣೆಗೆ ದೂರು ನೀಡಿದ್ದು, ಮಗುವಿನ ತಂದೆ ಬೀಡಿ ಸೇದಿದ ಬಳಿಕ ಮನೆಯೊಳಗೆ ಬೀಡಿ ತುಂಡು ಬಿಸಾಕುವುದು ಮುಂದುವರೆಸಿದದ್ದೇ ಈ ದುರ್ಘಟನೆಯ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಅವನಿಗೆ ಎಷ್ಟು ಬಾರಿ ಮನೆಗೆ ಬೀಡಿ ತುಂಡು ಬಿಸಾಕಬೇಡಿ ಎಂದು ಹೇಳಿದ್ದರೂ ಕೇಳದೆ ಇದ್ದಾನೆ. ನಿನ್ನೆ ಕೂಡ ತಾನೇ ಬಿಸಾಕಿದ್ದ ಬೀಡಿ ತುಂಡು ನನ್ನ ಮಗುವಿನ ಜೀವವನ್ನೇ ತೆಗೆದುಕೊಂಡಿತು,” ಎಂದು ಭಾವುಕತೆಯಿಂದ ಅವರು ಹೇಳಿದ್ದಾರೆ.

error: Content is protected !!