August 6, 2025
Screenshot_20250705_0926152-640x393

ಮಂಗಳೂರು: ನಗರದಲ್ಲಿ ಗಾಂಜಾ ವಿತರಣೆಗೆ ಪ್ಲಾನ್, ಐವರು ಯುವಕರು ಬಂಧನೆ

ಮಂಗಳೂರು ನಗರದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಗಾಂಜಾ ಹಂಚಿಕೊಳ್ಳುತ್ತಿದ್ದ ಐವರನ್ನು ನಗರದ ಹೊರವಲಯದ ಪಡುಶೆಡ್ಡೆ ಗ್ರಾಮದ ಹಾಲಾಡಿಯಲ್ಲಿ ಸೆನ್‌ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮಂಗಳೂರಿನ ಬಿಕರ್ನಕಟ್ಟೆ ಅಡುಮರೋಳಿ ನಿವಾಸಿ ತುಷಾರ್ ಅಲಿಯಾಸ್‌ ಸೋನು (21), ನಾಗೂರಿಯ ದ್ವನಿ ಶೆಟ್ಟಿ (20), ಜಲ್ಲಿಗುಡ್ಡೆಯ ಸಾಗರ್ ಕಕೇರಾ (19), ಶಕ್ತಿನಗರದ ವಿಕಾಸ್ ಥಾಪಾ ಅಲಿಯಾಸ್ ಪುಚ್ಚಿ (23) ಹಾಗೂ ಅಳಕೆ ಕಂಡೆಟ್ಟುವಿನ ವಿಘ್ನೇಶ್ ಕಾಮತ್ (24) ಎಂದು ಗುರುತಿಸಲಾಗಿದೆ.

ಅವರು ಬಳಿಯಿಂದ ಒಟ್ಟು ಸುಮಾರು 7.90 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 5.20 ಲಕ್ಷ ರೂ. ಮೌಲ್ಯದ 5.759 ಕೆ.ಜಿ. ಗಾಂಜಾ, 2 ಲಕ್ಷ ಮೌಲ್ಯದ 6 ಮೊಬೈಲ್‌ ಫೋನ್‌ಗಳು, 70 ಸಾವಿರ ರೂ. ಮೌಲ್ಯದ ದ್ವಿಚಕ್ರ ವಾಹನ ಹಾಗೂ 500 ರೂ. ಮೌಲ್ಯದ ತೂಕ ಮಾಪನ ಯಂತ್ರವು ಸೇರಿವೆ.

ಆರೋಪಿಗಳು ಗಾಂಜಾವನ್ನು ಚಿಕ್ಕ ಚಿಕ್ಕ ಪ್ಯಾಕೆಟ್‌ಗಳಲ್ಲಿ ಪ್ಯಾಕ್‌ ಮಾಡಿ ಪ್ರತಿಯೊಂದು ಪ್ಯಾಕೆಟ್‌ನ್ನು 1 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರೆಂದು ತಿಳಿದುಬಂದಿದೆ.

ಧ್ರುವನ್ ಶೆಟ್ಟಿ (ಸಕಲೇಶಪುರ) ಮತ್ತು ಡಾ. ಪ್ರಜ್ವಲ್ (ಪೀಣ್ಯಸ್ ಬೀದರ್) ಎಂಬವರು ಈ ಗಾಂಜಾವನ್ನು ಮೈಸೂರಿನಿಂದ ಪೂರೈಸುತ್ತಿದ್ದಾಗ ತಿಳಿದುಬಂದಿದ್ದು, ಇವರ ಬಂಧನಕ್ಕಾಗಿ ಪೊಲೀಸರು ಈಗಾಗಲೇ ಬಲೆ ಬೀಸಿದ್ದಾರೆ.

ಜುಲೈ 2ರಂದು ಪ್ರಕರಣ ಸಂಬಂಧ ಖಚಿತ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಹಾಲಾಡಿಯ ನಿರ್ಜನ ಪ್ರದೇಶದಲ್ಲಿ ಗಿಡಮರಗಳ ನಡುವೆ ಐವರು ಯುವಕರು ಹಾಗೂ ಒಂದು ಸ್ಕೂಟರ್ ಕಂಡುಬಂದಿದ್ದರು. ಪೊಲೀಸರನ್ನು ಕಂಡಾಗ ಆರೋಪಿಗಳು ಓಡಲು ಯತ್ನಿಸಿದರೂ, ಪೊಲೀಸ್ ಸಿಬ್ಬಂದಿ ಅವರನ್ನು ಸುತ್ತುವರಿದು ಬಲವಾಗಿ ಬಂಧಿಸುವಲ್ಲಿ ಯಶಸ್ವಿಯಾದರು.

ಅದು ವೇಳೆ ಆರೋಪಿಗಳು ಗಾಂಜಾ ಹಂಚಿಕೊಂಡು, ಮಾರಾಟ ಮಾಡಲು ಸಿದ್ಧತೆ ನಡೆಸುತ್ತಿದ್ದು, ವಾಹನಕ್ಕಾಗಿ ಕಾಯುತ್ತಿದ್ದುದಾಗಿ ಮಾಹಿತಿ ನೀಡಿದ್ದಾರೆ.

error: Content is protected !!