August 6, 2025
Screenshot_20250619_1106132

ಬ್ರಹ್ಮಾವರ: ಸೀತಾ ನದಿಯಲ್ಲಿ ಅಪರಿಚಿತ ಗಂಡಸನ ಮೃತದೇಹ ಪತ್ತೆ

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಾರಾಡಿ ಗ್ರಾಮದ ಸೀತಾ ನದಿಯಲ್ಲಿ ಅಪರಿಚಿತ ಗಂಡಸನ ಮೃತದೇಹ ಪತ್ತೆಯಾದ ಘಟನೆ 18/06/2025 ರಂದು ಸಂಜೆ 4:30ರ ಸುಮಾರಿಗೆ ವರದಿಯಾಗಿದೆ. ಮೃತ ವ್ಯಕ್ತಿಗೆ ಸುಮಾರು 45 ರಿಂದ 50 ವರ್ಷದ ವಯಸ್ಸು ಇರುತ್ತದೆ ಎಂದು ಅಂದಾಜಿಸಲಾಗಿದೆ.

ಆತನ ಗುರುತು ಈವರೆಗೆ ಪತ್ತೆಯಾಗಿಲ್ಲ. ಪ್ರಾಥಮಿಕ ಮಾಹಿತಿಯಂತೆ, ದಿನಾಂಕ 17/06/2025 ರಂದು ರಾತ್ರಿ ವೇಳೆಗೆ ವ್ಯಕ್ತಿ ಎಲ್ಲಾದರೂ ನದಿಯ ದಡದಲ್ಲಿ ನಿಂತುಕೊಂಡು ಮೀನಿಗೆ ಗಾಳ ಹಾಕುತ್ತಿದ್ದಾಗ ಆಕಸ್ಮಿಕವಾಗಿ ಕಾಲುಜಾರಿ ನದಿಗೆ ಬಿದ್ದಿರಬಹುದು ಅಥವಾ ಇತರ ಯಾವದಾದರೂ ಕಾರಣದಿಂದ ನದಿಯಲ್ಲಿ ಮುಳುಗಿ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ.

ಈ ಘಟನೆ ಹಾರಾಡಿ ಗ್ರಾಮದ ಅಶೋಕ್ ಎಂಬವರ ಮನೆಯ ಸಮೀಪದ ನದಿತೀರದಲ್ಲಿ ನಡೆದಿದ್ದು, ಮೃತದೇಹವನ್ನು ಸ್ಥಳೀಯರು ನೋಡಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 44/2025ರಂತೆ BNSS ಕಲಂ 194 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ಮೃತದೇಹವನ್ನು ಪತ್ತೆಹಚ್ಚಿ ಮರಣದ ನಿಖರ ಕಾರಣ ತಿಳಿದುಬರಬೇಕಾದ್ದು ಮಿಕ್ಕಿದೆ.

error: Content is protected !!