
ಬೈಂದೂರು : ಸಮುದ್ರದ ಪ್ರಚಂಡ ಅಲೆಗಳಿಗೆ ಸಿಕ್ಕು ದೋಣಿ ಮಗುಚಿದ ಸಂದರ್ಭದಲ್ಲಿ, ಲೈಫ್ ಜಾಕೆಟ್ ಧರಿಸಿದ್ದ 9 ಮೀನುಗಾರರು ಅಪಾಯದಿಂದ ರಕ್ಷಿಸಿಕೊಂಡು ದಡವನ್ನು ಸೇರಿದ್ದಾರೆ.
ಘಟನೆಯಲ್ಲಿ ರಕ್ಷಣೆ ಪಡೆದವರು ಉಪ್ಪುಂದದ ಚಂದ್ರ ಖಾರ್ವಿ, ಪ್ರಮೋದ್, ಪ್ರಜ್ವಲ್, ಗೌತಮ್, ಭಾಸ್ಕರ್, ಯೋಗಿರಾಜ್, ಗೋವಿಂದ, ಬಾಬು ಖಾರ್ವಿ ಮತ್ತು ದೀಪಕ್. ಇವರು ಬೆಳಿಗ್ಗೆ ಶಾರದಾ ಖಾರ್ವಿನ ಶಿವಪ್ರಸಾದ್ ದೋಣಿಯಲ್ಲಿ ಮೀನುಗಾರಿಕೆಗೆ ಹೊರಟಿದ್ದರು. ಮಡಿಕಲ್ ಎಲ್.ಪಿ. ಬಳಿ ಸಮುದ್ರದ ಪ್ರಬಲ ಅಲೆಗಳ ದಾಳಿಗೆ ದೋಣಿ ಮಗುಚಿ ಹೋಯಿತು.
ದೋಣಿ ಮಗುಚಿದಾಗ ಎಲ್ಲಾ 9 ಮೀನುಗಾರರು ನೀರಿಗೆ ಬಿದ್ದರು. ಆದರೆ, ಲೈಫ್ ಜಾಕೆಟ್ ಧರಿಸಿದ್ದರಿಂದ ಅವರು ಸಮುದ್ರದಲ್ಲಿ ಈಜಿಕೊಂಡು ಬಂದರು. ದಡದಲ್ಲಿದ್ದ ಇತರ ಮೀನುಗಾರರು ತಕ್ಷಣ ನೆರವು ನೀಡಿ ಅವರನ್ನು ರಕ್ಷಿಸಿದರು