
ಕಾರ್ಕಳ ನಿಟ್ಟೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿಎಲ್‌ಎಸ್‌ಐ ಪದವಿ ವಿದ್ಯಾರ್ಥಿ ಅಭಿನಂದನ್ ರಜೆಗಾಗಿ ಬೈಂದೂರಿನ ಮನೆಯವರಿಗೆ ಬೇಟಿ ನೀಡಿದ ನಂತರ, ಕಾಲೇಜಿಗೆ ಹೋದವನು ನಾಪತ್ತೆಯಾಗಿರುವ ಘಟನೆ ನಡೆದಿದೆ.
ಮಾರ್ಚ್ 22ರಂದು ಮಧ್ಯಾಹ್ನ, ಅಭಿನಂದನ್ “ಕಾಲೇಜಿಗೆ ಹೋಗುತ್ತಿದ್ದೇನೆ” ಎಂದು ಮನೆಮಂದಿಗೆ ತಿಳಿಸಿ ಹೊರಟಿದ್ದ. ಅದೇ ದಿನ, ಇಬ್ಬು ಬಾರಿ ಮನೆಯವರಿಗೆ ಕರೆ ಮಾಡಿದ್ದರೂ, ನಂತರ ವಾಪಸು ಮನೆಗೆ ಬಂದಿಲ್ಲವೆಂದು ದೂರು ನೀಡಲಾಗಿದೆ.
ತಂದೆ ಮಹಾಬಲೇಶ್ವರ ಅವರು ನಿಟ್ಟೆ ಕಾಲೇಜಿಗೆ ತೆರಳಿ ವಿಚಾರಿಸಿದಾಗ, ಅಭಿನಂದನ್ ರಜೆ ಹಾಕಿ ಕಾಲೇಜಿನಿಂದ ಹೊರಟಿರುವ ಮಾಹಿತಿ ದೊರಕಿತು. ಆದರೆ, ಆತನ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.