August 3, 2025
700x350xt

ಮಹಾನ್ ಉದ್ಯಮಿ ದಿವಂಗತ ರತನ್ ಟಾಟಾ ಅವರ ಕೊಡುಗೆ ಈ ದೇಶಕ್ಕೆ ಮಾತ್ರವಲ್ಲ, ಅವರ ಮಾನವೀಯತೆ ಮತ್ತು ಪರೋಪಕಾರದ ಗುಣಗಳು ಅವರನ್ನು ವಿಶ್ವದಾದ್ಯಂತ ಅಭಿಮಾನೀಯರನ್ನಾಗಿಸಿದ್ದವೆ. ಅವರು ಸೃಷ್ಟಿಸಿದ ಆಸ್ತಿಯು ಕೇವಲ ವೈಯಕ್ತಿಕ ಸಂಪತ್ತಾಗಿ ಉಳಿಯದೆ, ಅವರ ಜೀವನದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಾಯ ಮಾಡಿದ ಎಲ್ಲರ ಹಿತಕ್ಕಾಗಿ ಮೀಸಲಾಗಿತ್ತು.

ರತನ್ ಟಾಟಾ ಅವರು ನಿಧನರಾದರೂ, ಅವರ ಬರೆದಿಟ್ಟ ವಿಲ್‌ (ಉಯಿಲ್‌) ಈಗಲೂ ಸುದ್ದಿಯಾಗುತ್ತಿದೆ. ಅವರು ಯಾವುದೇ ಒಬ್ಬರನ್ನು ನಿರಾಶ್ರಿತರಾಗಿ ಬಿಡದೇ, ಎಲ್ಲರಿಗೂ ಸಹಾಯ ಮಾಡುವ ಪ್ರಬಲ ಉದಾಹರಣೆಯಾಗಿ ಉಳಿದಿದ್ದಾರೆ. ಅವರ ಮನೆ ಕೆಲಸಗಾರರಿಗೆ ಮಾತ್ರ ಮೂರು ಕೋಟಿ ರೂಪಾಯಿ ನೀಡುವಂತೆ ವಿಲ್‌ನಲ್ಲಿ ಉಲ್ಲೇಖಿಸಲಾಗಿದೆ.

ಇತ್ತೀಚಿನ ವರದಿಗಳ ಪ್ರಕಾರ, ಅವರೊಂದಿಗೆ ಏಳು ವರ್ಷಗಳ ಕಾಲ ಮನೆ ಸೇವಕನಾಗಿ ಕಾರ್ಯನಿರ್ವಹಿಸಿದ ವ್ಯಕ್ತಿಗೆ 15 ಲಕ್ಷ ರೂಪಾಯಿ ನೀಡಲಾಗಿದೆ. ಕಾರು ಸ್ವಚ್ಛಗೊಳಿಸುತ್ತಿದ್ದ ಸಿಬ್ಬಂದಿಗಳಿಗೆ ತಲಾ ಒಂದು ಲಕ್ಷ ರೂಪಾಯಿ ನೀಡಲಾಗಿದ್ದು, ಅವರ ಮನೆ ಬಾಣಸಿಗ ರಜನ್ ಶಾಗೆ 1 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಸೇವಕ ಸುಬ್ಬಯ್ಯ ಕೊನಾರ್‌ಗೆ 66 ಲಕ್ಷ ರೂಪಾಯಿ ಹಾಗೂ ಕಾರ್ಯದರ್ಶಿ ಡೆಲ್ನಜ್ ಗ್ಲಿಡರ್‌ಗೆ 10 ಲಕ್ಷ ರೂಪಾಯಿ ನೀಡುವಂತೆ ಸೂಚನೆ ನೀಡಲಾಗಿದೆ.

ರತನ್ ಟಾಟಾ ಅವರ ದಾನಶೀಲತೆ ಕೇವಲ ಅವರ ಆಪ್ತ ವಲಯಕ್ಕೆ ಮಾತ್ರ ಸೀಮಿತವಾಗಿರದೆ, ಹಲವು ಎನ್‌ಜಿಓಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೂ ಸಹಾಯ ಮಾಡಲು ಅವರು ಮುಂದಾಗಿದ್ದರು. ಅವರ ಸಹಾಯಕ ಶಂತನು ನಾಯ್ಡು ಅವರ ಎಂಬಿಎ ಶಿಕ್ಷಣಕ್ಕೆ 1 ಕೋಟಿ ರೂಪಾಯಿ ಸಾಲ ನೀಡುವಂತೆ ವಿಲ್‌ನಲ್ಲಿ ಬರೆದಿದ್ದಾರೆ. ಅಲ್ಲದೆ, ತಮ್ಮ ನೆರೆಹೊರೆಯವರಿಗೆ ಹಾಗೂ ಡ್ರೈವರ್ ರಾಜು ಲಿಯೋನ್ ಅವರ 18 ಲಕ್ಷ ರೂ. ಸಾಲವನ್ನು ಮನ್ನಾ ಮಾಡಲು ಸೂಚಿಸಿದ್ದಾರೆ.

ರತನ್ ಟಾಟಾ ಅವರು ತಮ್ಮ ಜೀವನದಿಂದ ಕೇವಲ ಉದ್ಯಮದ ಮೌಲ್ಯಗಳನ್ನು ಮಾತ್ರವಲ್ಲ, ಮಾನವೀಯತೆಯ ಸತ್ಯವನ್ನು ಮತ್ತು ದಾನಶೀಲತೆಯ ಮಹತ್ವವನ್ನು ತೋರಿಸಿದ್ದಾರೆ.

error: Content is protected !!