
ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ
ಉಡುಪಿ: ಎಪ್ರಿಲ್ 16 ರಿಂದ 19 ರವರೆಗೆ ಬಂಟಕಲ್ಲು ವಯಾ ಶಂಕರಪುರದಲ್ಲಿರುವ ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಹಾಗೂ ನೇಮೋತ್ಸವ ನಡೆಯಲಿದೆ.
ಪುನರ್ ನಿರ್ಮಿತ ಸಪರಿವಾರ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕವು ಪಂಡಿತ ಗುಂಡಿಬೈಲು ಶ್ರೀ ಸುಬ್ರಹ್ಮಣ್ಯ ಭಟ್ಟರ ಮಾರ್ಗದರ್ಶನದಲ್ಲಿ ನೆರವೇರಲಿದೆ.
ಮುಖ್ಯ ಕಾರ್ಯಕ್ರಮಗಳು:
- ಏಪ್ರಿಲ್ 16: ಹಸಿರು ಹೊರೆಕಾಣಿಕೆ ಮೆರವಣಿಗೆ.
- ಏಪ್ರಿಲ್ 17: ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭೆ, ಮಹಾ ಅನ್ನಸಂತರ್ಪಣೆ.
- ಏಪ್ರಿಲ್ 18: ಶ್ರೀ ಬಬ್ಬುಸ್ವಾಮಿ ಮತ್ತು ಶ್ರೀ ತನ್ನಿಮಾನಿಗ ದೈವಗಳ ನೇಮೋತ್ಸವ.
- ಏಪ್ರಿಲ್ 19: ಶ್ರೀ ಧೂಮಾವತಿ, ಶ್ರೀ ಬಂಟ ಶ್ರೀ ಗುಳಿಗ ಮತ್ತು ಶ್ರೀ ಕೊರಗಜ್ಜ ದೈವಗಳ ನೇಮೋತ್ಸವ.
ಈ ವಿಶೇಷ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಅರ್ಚಕರು ಮತ್ತು ಸಮಿತಿಯವರು ಕೋರಿದ್ದಾರೆ.