
ಯಲಹಂಕದಲ್ಲಿ ಫೆಬ್ರವರಿ 10ರಿಂದ 14ರವರೆಗೆ ನಡೆಯಲಿರುವ ಏರೋ ಇಂಡಿಯಾ 2025 ವೈಮಾನಿಕ ಪ್ರದರ್ಶನದ ಹಿನ್ನೆಲೆಯಲ್ಲಿ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಟೇಕಾಫ್ ಮತ್ತು ಲ್ಯಾಂಡಿಂಗ್ ಕಾರ್ಯಾಚರಣೆಯಲ್ಲಿ ತಾತ್ಕಾಲಿಕ ವ್ಯತ್ಯಯಗಳು ಉಂಟಾಗಲಿವೆ. ಈ ಅವಧಿಯಲ್ಲಿ ಒಟ್ಟು 47 ಗಂಟೆಗಳ ಕಾಲ ವಿಮಾನ ಸಂಚಾರಕ್ಕೆ ತೊಂದರೆಯಾಗುವ ನಿರೀಕ್ಷೆಯಿದೆ.
ವಿಮಾನ ಸಂಚಾರದ ನಿರ್ಬಂಧಗಳ ವಿವರ:
ಫೆಬ್ರವರಿ 5ರಿಂದ 8ರವರೆಗೆ: ಬೆಳಿಗ್ಗೆ 9 ರಿಂದ ಮಧ್ಯಾಹ್ನ 12ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 5ರವರೆಗೆ
ಫೆಬ್ರವರಿ 9ರಂದು: ಬೆಳಿಗ್ಗೆ 9 ರಿಂದ ಮಧ್ಯಾಹ್ನ 12ರವರೆಗೆ
ಫೆಬ್ರವರಿ 10ರಂದು: ಬೆಳಿಗ್ಗೆ 9 ರಿಂದ ಮಧ್ಯಾಹ್ನ 12ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 4ರವರೆಗೆ
ಫೆಬ್ರವರಿ 11 ಮತ್ತು 12ರಂದು: ಮಧ್ಯಾಹ್ನ 12 ರಿಂದ ಸಂಜೆ 3ರವರೆಗೆ
ಫೆಬ್ರವರಿ 13 ಮತ್ತು 14ರಂದು: ಬೆಳಿಗ್ಗೆ 9 ರಿಂದ ಮಧ್ಯಾಹ್ನ 12ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 5ರವರೆಗೆ
ಈ ಸಮಯಗಳಲ್ಲಿ ವಿಮಾನ ನಿಲ್ದಾಣದ ಕಾರ್ಯಾಚರಣೆ ಸ್ಥಗಿತಗೊಳ್ಳಲಿದೆ. ಪ್ರಯಾಣಿಕರು ತಮ್ಮ ವಿಮಾನಯಾನ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದು, ತಮ್ಮ ಪ್ರಯಾಣದ ವೇಳಾಪಟ್ಟಿಯನ್ನು ಪರಿಶೀಲಿಸುವುದು ಶ್ರೇಯಸ್ಕರ.
ಏರೋ ಇಂಡಿಯಾ 2025 ಪ್ರದರ್ಶನವು ‘ರನ್‌ವೇ ಟು ಎ ಬಿಲಿಯನ್ ಆಪರ್ಚುನಿಟೀಸ್’ ಎಂಬ ಥೀಮ್‌ನೊಂದಿಗೆ ಫೆಬ್ರವರಿ 10 ರಿಂದ 14ರವರೆಗೆ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದೆ. ಫೆಬ್ರವರಿ 13 ಮತ್ತು 14ರಂದು ಸಾರ್ವಜನಿಕರಿಗೆ ವೈಮಾನಿಕ ಪ್ರದರ್ಶನ ವೀಕ್ಷಿಸಲು ಅವಕಾಶ ನೀಡಲಾಗಿದೆ.