August 6, 2025
Screenshot_20250702_1232212-640x438

ಗಂಗೊಳ್ಳಿ: ಬೈಕ್‌-ಪಿಕಪ್‌ ಅಪಘಾತ, ಸವಾರ ಮೃತಪಟ್ಟಿದ್ದಾರೆ

ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಗಂಗೊಳ್ಳಿ ಸಮೀಪ ಬೈಕ್‌ ಮತ್ತು ಪಿಕಪ್‌ ವಾಹನದ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ಲಕ್ಷ್ಮಣ ಎಂದು ಗುರುತಿಸಲಾಗಿದೆ.

ಅಪಘಾತದ ವಿವರ: ಜುಲೈ 1, 2025 ರಂದು ಸುಮಾರು 12:50 ಕ್ಕೆ, ಮರವಂತೆ ಗ್ರಾಮದ ವರಾಹಸ್ವಾಮಿ ದೇವಸ್ಥಾನ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಘಟನೆಯಾಗಿದ್ದು, ಫಿರ್ಯಾದಿದಾರ ಗಣಪ ಕೃಷ್ಣ (56) ಅವರು ಮರವಂತೆಯಲ್ಲಿನ ಬಸ್‌ ನಿಲ್ದಾಣದ ಬಳಿ ನಿಂತಿದ್ದರು. ಆಗ ಮರವಂತೆ ಸೀಲ್ಯಾಂಡ್‌ ಬಾರ್‌ ದಿಕ್ಕಿನಿಂದ KA 20 EJ 5601 ನಂಬರ್‌ನ ಬೈಕ್‌ನಲ್ಲಿ ಲಕ್ಷ್ಮಣ ಅವರವರು ಯಾವುದೇ ಸೂಚನೆ ಇಲ್ಲದೆ ಅತೀವ ವೇಗದಲ್ಲಿ ಚಾಲನೆ ಮಾಡುತ್ತಿದ್ದರು.

ಅವರು ನಿಯಂತ್ರಣ ತಪ್ಪಿ ಟ್ರಾಸಿ ಕಡೆಯಿಂದ ಬೈಂದೂರು ಕಡೆಗೆ ಸಾಗುತ್ತಿದ್ದ KA 19 AD 7742 ನಂಬರ್‌ ಟಾಟಾ ಯೋಧಾ ಪಿಕಪ್‌ ವಾಹನಕ್ಕೆ ಢಿಕ್ಕಿ ಹೊಡೆದಿದ್ದಾರೆ. ಢಿಕ್ಕಿಯ ಪರಿಣಾಮ ಲಕ್ಷ್ಮಣ ಅವರು ತಮ್ಮ ಬೈಕ್‌ ಸಹಿತ ಪಿಕಪ್‌ ವಾಹನದ ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದಾರೆ.

ತಕ್ಷಣವೇ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ವೈದ್ಯರು ಅವರನ್ನು ಮೃತಪಟ್ಟಿದ್ದಾರೆಂದು ಘೋಷಿಸಿದರು.

ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಅಪಘಾತಕ್ಕೆ ಬೈಕ್‌ ಸವಾರ ಲಕ್ಷ್ಮಣರವರ ನಿರ್ಲಕ್ಷತೆಯೇ ಕಾರಣ ಎಂದು ತಿಳಿಸಿದ್ದಾರೆ. ಈ ಸಂಬಂಧ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!