
ಅಂಕಾರಾ: ಭಾರತದೊಂದಿಗೆ ನಡೆಯುತ್ತಿರುವ ಉದ್ವಿಗ್ನ ಸ್ಥಿತಿಯ ನಡುವೆ, ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಕಳುಹಿಸುವ ಬಗ್ಗೆ ಟರ್ಕಿಯು ನಿರಾಕರಣೆ ನೀಡಿದೆ.
ಟರ್ಕಿಯಿಂದ ಆರು ಶಸ್ತ್ರಾಸ್ತ್ರ ವಿಮಾನಗಳು ಪಾಕಿಸ್ತಾನಕ್ಕೆ ಕಳೆಯಲಾಗಿದೆ ಎಂಬ ಸುದ್ದಿಯನ್ನು, ಟರ್ಕಿಯ ಅಧ್ಯಕ್ಷೀಯ ಸಂವಹನ ವಿಭಾಗವು ಸೋಮವಾರ ಖಂಡಿಸಿದೆ.
ಪಾಕಿಸ್ತಾನದ ನೆಲದಲ್ಲಿ ಇಂಧನ ಭರ್ತಿ ಮಾಡುವ ಸಲುವಾಗಿ ಟರ್ಕಿಯ ಸರಕು ವಿಮಾನವೊಂದು ಇಳಿದು, ಬಳಿಕ ತನ್ನ ಗಮ್ಯಸ್ಥಾನತ್ತ ಸಾಗಿದ್ದು ಮಾತ್ರವಾಗಿದೆ. ಈ ಬಗ್ಗೆ ಅಧಿಕೃತ ಸಂಸ್ಥೆಗಳ ಹೊರತು ಯಾರಿಂದಲಾದರೂ ಬಂದಿರುವ ಊಹಾತ್ಮಕ ಹೇಳಿಕೆಗಳನ್ನು ಗಮನಿಸಬಾರದು ಎಂದು ಟರ್ಕಿಯ ರಕ್ಷಣಾ ಸಚಿವಾಲಯ ತಿಳಿಸಿದೆ.
ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಕಳುಹಿಸಲಾಗಿದೆ ಎಂಬಂತೆ ಹಲವಾರು ಮಾಧ್ಯಮಗಳು ವರದಿ ಮಾಡಿದ್ದವು. ಬಳಿಕ ಟರ್ಕಿಯು ಸರಕು ವಿಮಾನದ ಚಿತ್ರವನ್ನು ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದೆ.