August 6, 2025
2025-04-25 102039

ಮಂಗಳೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಗುಂಡಿನ ದಾಳಿಯನ್ನು ಸಮರ್ಥಿಸಿರುವ ಫೇಸ್‌ಬುಕ್ ಪೋಸ್ಟ್‌ ಸಂಬಂಧ ಮಂಗಳೂರು ಜಿಲ್ಲೆಯ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಉಳ್ಳಾಲದ ಸತೀಶ್ ಕುಮಾರ್ ನೀಡಿದ ದೂರಿನಂತೆ, ಪೊಲೀಸರು ಬಿಎನ್‌ಎಸ್ ಸೆಕ್ಷನ್ 192 ಹಾಗೂ 353(1)(b) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಈ ಪೋಸ್ಟ್ “ನಿಚ್ಚು ಮಂಗಳೂರು” ಎಂಬ ಹೆಸರಿನ ಫೇಸ್‌ಬುಕ್ ಪೇಜ್‌ನಲ್ಲಿ ಪ್ರಕಟಗೊಂಡಿದ್ದು, 2023ರಲ್ಲಿ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಮೂವರು ಮುಸ್ಲಿಮರು ಹತ್ಯೆಯಾಗಿದ್ದನ್ನು ಉಲ್ಲೇಖಿಸಿ, “ಆರೋಪಿಗೆ ಸರಿಯಾದ ಶಿಕ್ಷೆಯಾಗಿಲ್ಲ; ಕಾಶ್ಮೀರದ ಘಟನೆಗೆ ಅದು ಕಾರಣ” ಎಂಬ ಭಾಷೆ ಬಳಸಲಾಗಿದೆ. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಹಲವರು ಇದನ್ನು ಉಗ್ರವಾದಕ್ಕೆ ಉತ್ತೇಜನ ಎನ್ನಿಸಿಕೊಂಡಿದ್ದಾರೆ.

ಫೇಸ್‌ಬುಕ್ ಪೇಜ್‌ನ ಡಿಪಿಯಲ್ಲಿ ಕಾಣುತ್ತಿರುವ ಯುವಕ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯವನು ಎಂಬ ಮಾಹಿತಿ ಲಭ್ಯವಿದ್ದು, ಪೊಲೀಸರು ಆತನ ಪತ್ತೆಗಾಗಿ ಜಾಲ ಬಿಸಿದರು.

error: Content is protected !!