August 7, 2025
friendmurder-696x392

ಕಲಬುರಗಿ: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಗೆಳೆಯನನ್ನು ಕೊಂದ ವ್ಯಕ್ತಿ ಶರಣು

ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮುರಡಿ ಗ್ರಾಮದಲ್ಲಿ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಸ್ನೇಹಿತನನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿದ ದುರ್ಘಟನೆ ನಡೆದಿದೆ. ಅಂಬರೀಶ್ (28) ಎಂಬಾತನನ್ನು ಅಜಯ್ ಎಂಬಾತ ವೈರ್‌ನಿಂದ ಕತ್ತಿಗೆ ಬಿಗಿದು ಹತ್ಯೆ ಮಾಡಿದ್ದಾನೆ.

ಅಜಯ್ ಹಾಗೂ ಅಂಬರೀಶ್ ಹಲವು ವರ್ಷಗಳ ಸ್ನೇಹಿತರು. ಆದರೆ ಅಂಬರೀಶ್ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನೆಂಬ ಕಾರಣಕ್ಕೆ ಇತ್ತೀಚೆಗಷ್ಟೆ ಅಜಯ್ ಪತ್ನಿ ಮನೆ ತೊರೆದಿದ್ದರು. ಈ ಹಿನ್ನೆಲೆಯಲ್ಲಿ ಅಂಬರೀಶ್ ಅಜಯ್‌ಗೆ “ನಿನ್ನ ಪತ್ನಿ ನನ್ನ ಮಾತು ಕೇಳುತ್ತಾಳೆ, ನನ್ನ ಜೊತೆ ಇರಲು ಒಪ್ಪಿಸು” ಎಂದು ಕೇಳಿ, ಆತನನ್ನು ಬೆಂಗಳೂರಿನಿಂದ ಮುರಡಿಗೆ ಕರೆದುಕೊಂಡು ಬಂದಿದ್ದ. ನಂತರ ತಾನೇ ಮನೆಯಲ್ಲಿ ಅಂಬರೀಶ್‌ನನ್ನು ಕೊಂದಿದ್ದಾನೆ.

ಹತ್ಯೆ ಬಳಿಕ ಅಜಯ್ ತಾನೇ ಪೊಲೀಸರಿಗೆ ಮಾಹಿತಿ ನೀಡಿ, ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಈ ಸಂಬಂಧ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!