August 6, 2025
brijesh_kabbaddi

ಉತ್ತರಪ್ರದೇಶ: ಬೀದಿ ನಾಯಿಯ ಕಚ್ಚಾಟದಿಂದ ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಮೃತ್ಯು

ಉತ್ತರಪ್ರದೇಶದ ಬುಲಂದ್ ಶಹರ್‌ನಲ್ಲಿ ರೇಬೀಸ್‌ನಿಂದ ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಬ್ರಜೇಶ್ ಸೋಲಂಕಿ ಮೃತಪಟ್ಟಿರುವ ಘಟನೆ ದೇಶಾದ್ಯಾಂತ ಚರ್ಚೆಗೆ ಕಾರಣವಾಗಿದೆ. ಬೀದಿ ನಾಯಿಯನ್ನು ಉಳಿಸಲು ಯತ್ನಿಸಿದಾಗ ನಾಯಿ ಕಚ್ಚಿದ ಘಟನೆ ನಡೆದಿದ್ದು, ಸುಮಾರು ಒಂದು ತಿಂಗಳ ಬಳಿಕ ಬ್ರಜೇಶ್ ಸಾವನ್ನಪ್ಪಿದ್ದಾರೆ.

ಖುರ್ಜಾ ನಗರ ಕೊತ್ವಾಲಿಯ ಫರಾನಾ ಗ್ರಾಮದ ನಿವಾಸಿಯಾಗಿದ್ದ 24 ವರ್ಷದ ಬ್ರಜೇಶ್, ಗಾಯಗೊಂಡ ನಾಯಿಯನ್ನು ರಕ್ಷಿಸಲು ಮುಂದಾಗಿದ್ದರು. ಆದರೆ ನಾಯಿ ಕಚ್ಚಿದ ನಂತರ ಅವರು ಅಗತ್ಯ ಚಿಕಿತ್ಸೆ ಪಡೆಯಲೇ ಇಲ್ಲ. ಪರಿಣಾಮ ಅವರ ಆರೋಗ್ಯ ಹದಗೆಟ್ಟು, ರೇಬೀಸ್‌ನ ಲಕ್ಷಣಗಳು ತೋರಿಸಲಾರಂಭಿಸಿತು. ಶೇಷ್ಟ ಚಿಕಿತ್ಸೆ ಇಲ್ಲದ ಕಾರಣ ಕೊನೆಗೂ ಅವರು ಸಾವಿಗೀಡಾಗಿದರು.

ಬ್ರಜೇಶ್ ಅವರ ಕೊನೆಯ ಕ್ಷಣಗಳಲ್ಲಿ ನರಳುತ್ತಿರುವ ವಿದ್ರಾವಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಘಟನೆ ನಾಯಿ ಅಥವಾ ಇತರ ಪ್ರಾಣಿಗಳ ಕಚ್ಚಾಟದ ಬಳಿಕ ಕೂಡಲೇ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುವುದು ಎಷ್ಟು ಅಗತ್ಯವೋ ಎಂಬುದನ್ನು ಪುನರುಚ್ಛರಿಸಿದೆ. ವೈದ್ಯಕೀಯ ತಜ್ಞರು ಕೂಡ ಇಂತಹ ಸಂದರ್ಭಗಳಲ್ಲಿ ತಕ್ಷಣವೇ ವೈದ್ಯಕೀಯ ಸಲಹೆ ಪಡೆದು, ಅಗತ್ಯ ಎಂಜೆಕ್ಷನ್‌ಗಳನ್ನು ತಪ್ಪದೆ ತೆಗೆದುಕೊಳ್ಳುವುದು ಅತೀ ಮುಖ್ಯ ಎಂದು ತಿಳಿಸಿಕೊಡುತ್ತಾರೆ.

error: Content is protected !!