
ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿರುವ ಎಸ್‌ಐಟಿ ಅಧಿಕಾರಿಗಳು ಇಂದಿನಿಂದಲೇ ತನಿಖೆ ಪ್ರಾರಂಭಿಸಲಿದ್ದಾರೆ ಎನ್ನಲಾಗಿದೆ.
“ನಾನು ನೂರಾರು ಶವಗಳನ್ನು ಹೂತು ಹಾಕಿದ್ದೇನೆ” ಎಂಬ ಪಶ್ಚಾತಾಪಪೂರ್ಣ ಪತ್ರವನ್ನು ಬರೆದಿದ್ದ ಅನಾಮಧೇಯ ವ್ಯಕ್ತಿಯನ್ನು ಎಸ್‌ಐಟಿ ಇಂದು ವಶಕ್ಕೆ ತೆಗೆದುಕೊಳ್ಳಲಿದ್ದು, ವಿಚಾರಣೆ ಆರಂಭಿಸುವ ಸಾಧ್ಯತೆ ಇದೆ.
ಇದೀಗ ಕೋರ್ಟಿಗೆ ಮನವಿ ಸಲ್ಲಿಸುವ ಮೂಲಕ, ಆ ವ್ಯಕ್ತಿಯನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುವ ಕ್ರಮಕ್ಕೆ ಅಧಿಕೃತತೆ ನೀಡಲಿರುವರು.
ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಸಂಚಲನ ಉಂಟುಮಾಡಿರುವ ಧರ್ಮಸ್ಥಳ ಪ್ರಕರಣವು ಎಸ್‌ಐಟಿ ರಚನೆಯ ಬಳಿಕ ತ್ವರಿತಗತಿಯಲ್ಲಿ ಇನ್ಮುಂದೆ ಸಾಗಬಹುದು ಎಂಬ ನಿರೀಕ್ಷೆಯನ್ನು ಸಾರ್ವಜನಿಕರು ಹೊಂದಿದ್ದಾರೆ.