
ಬೆಳ್ತಂಗಡಿ: ಅನಾಮಿಕ ಸಾಕ್ಷಿದಾರನ ಹೇಳಿಕೆಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸುತ್ತಿರುವ ಎಸ್.ಐ.ಟಿ ತಂಡ ಶುಕ್ರವಾರ ಹೊಸ ಸ್ಥಳದಲ್ಲಿ ತನಿಖೆ ಆರಂಭಿಸಿದೆ. ಧರ್ಮಸ್ಥಳ ತಾಲೂಕಿನ ಬೊಳಿಯಾರ್ ಗೋಂಕ್ರತಾರ್ ಪ್ರದೇಶದ ಸಮೀಪಕ್ಕೆ ಸಾಕ್ಷಿದಾರನೊಂದಿಗೆ ಎಸ್.ಐ.ಟಿ ತಂಡ ಇಂದು ತೆರಳಿದೆ.
ಕಳೆದ ಎರಡು ವಾರಗಳ ಕಾಲ ನೇತ್ರಾವತಿ ಸ್ನಾನಘಟ್ಟದ ಬಳಿ ಸಾಕ್ಷಿದಾರ ತೋರಿಸಿದ ಸ್ಥಳಗಳಲ್ಲಿ ಅಗೆಯುವ ಕಾರ್ಯ ನಡೆಯಿತು. ಈಗ ಹೊಸ ಪ್ರದೇಶಕ್ಕೆ ಸಾಕ್ಷಿದಾರನನ್ನು ಕರೆದುಕೊಂಡು ಹೋಗಲಾಗಿದೆ. ಇಲ್ಲಿ ಅವರು ಎಷ್ಟು ಸ್ಥಳಗಳನ್ನು ಗುರುತಿಸುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಒಟ್ಟಾರೆಯಾಗಿ, ಎಸ್.ಐ.ಟಿ ತಂಡ ನೇತ್ರಾವತಿ ಸ್ನಾನಘಟ್ಟದ ಮೊದಲ ಹಂತದ ತನಿಖೆಯನ್ನು ಪೂರ್ಣಗೊಳಿಸಿ, ಎರಡನೇ ಹಂತದ ಕಾರ್ಯಾಚರಣೆಗೆ ಮುಂದುವರಿದಿದೆ. ನೇತ್ರಾವತಿಯಲ್ಲಿ ಎರಡು ವಿವಿಧ ಸ್ಥಳಗಳಲ್ಲಿ ಮಾನವ ಅವಶೇಷಗಳು ಸಿಗುತ್ತಿದ್ದು, ಬೊಳಿಯಾರ್ ಪ್ರದೇಶದಲ್ಲಿ ಏನು ನಡೆಯಲಿದೆ ಎಂಬುದು ಜನರಿಗೆ ಕುತೂಹಲ ತಂದಿದೆ.