
ಮಂಗಳೂರು ಕದ್ರಿಯ ಬಾರೆಬೈಲ್ ವಾರಾಹಿ ಪಂಜುರ್ಲಿ ಹಾಗೂ ಜಾರಂದಾಯ ದೈವದ ಉತ್ಸವದಲ್ಲಿ ನಟ ರಿಷಬ್ ಶೆಟ್ಟಿ ಮತ್ತು ಅವರ ಪತ್ನಿ ಭಾಗವಹಿಸಿದ್ದರು. ಈ ವೇಳೆ, ಅವರು ತಮ್ಮ ಜೀವನದ ಸಮಸ್ಯೆಗಳ ಬಗ್ಗೆ ದೈವಕ್ಕೆ ಮನವಿ ಸಲ್ಲಿಸಿದರು.
ವಾರಾಹಿ ಪಂಜುರ್ಲಿ ದೈವ ರಿಷಬ್ ಶೆಟ್ಟಿ ದಂಪತಿಗೆ ಆಶ್ವಾಸನೆ ನೀಡಿದ್ದು, “ನಿನಗೆ ಎದುರಾಳಿ ಇದ್ದಾರೆ. ಅವರು ನಿನ್ನ ಜೀವನ ಮತ್ತು ಕೆಲಸ ಹಾಳು ಮಾಡುವ ಯತ್ನ ಮಾಡಿದ್ದಾರೆ. ಆದರೆ ನೀನು ದೇವರ ನಂಬಿಕೆಯಿಂದ ಬಂದಿದ್ದೀಯೆ, ನಾನು ನಿನ್ನನ್ನು ಕೈಬಿಡಲ್ಲ. ಯಾರು ನಿನಗೆ ಕೆಡುಕತೆಯ ಮಾಡಿಕೊಂಡಿದ್ದಾರೆ ಎಂಬುದನ್ನು ನಾನು ತಿಳಿದಿದ್ದೇನೆ. ಈಗ ನಾನು ಹೇಳಲ್ಲ, ಆದರೆ ನೋಡಿಕೊಳ್ಳುತ್ತೇನೆ. ನೀನು ಹರಕೆ ಮಾಡು. ಐದು ತಿಂಗಳೊಳಗೆ ನಿನ್ನ ಜೀವನದಲ್ಲಿ ಉತ್ತಮ ಬದಲಾವಣೆ ತರ್ತೇನೆ,” ಎಂದು ಆಶೀರ್ವಚನ ನೀಡಿದೆ.
‘ಕಾಂತಾರ’ ಸಿನಿಮಾ ಚಿತ್ರೀಕರಣದ ವೇಳೆ ಅನೇಕ ಸವಾಲುಗಳು ಎದುರಾದವು. ಈಗ ಆ ಪ್ರಯತ್ನ ಫಲಿಸುತ್ತಿದ್ದು, ‘ಕಾಂತಾರ 1’ ಸಿನಿಮಾ ಅಕ್ಟೋಬರ್ 2ರಂದು ಬಿಡುಗಡೆಯಾಗಲಿದೆ.