August 6, 2025
images

ಪುಣೆ: ಡೆಲಿವರಿ ನೆಪದಲ್ಲಿ ಯುವತಿ ಮೇಲೆ ಅತ್ಯಾಚಾರ – ಆರೋಪಿ ಪರಾರಿ

ಪುಣೆದಲ್ಲಿ ಡೆಲಿವರಿ ಮಾಡಲು ಬಂದ ವ್ಯಕ್ತಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಹೃದಯವಿದ್ರಾವಕ ಘಟನೆ ನಡೆದಿದೆ. ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ಯುವತಿಯ ಮನೆಗೆ ಕೊರಿಯರ್ ನೀಡಲು ಬಂದಿದ್ದ ಆರೋಪಿ, OTP ಪರಿಶೀಲಿಸಲು ಯುವತಿ ಒಳಗೆ ಹೋಗಿದ್ದ ಸಂದರ್ಭದಲ್ಲಿ ಬಾಗಿಲು ಲಾಕ್ ಮಾಡಿಕೊಂಡು ಮನೆಯೊಳಗೆ ನುಗ್ಗಿದ್ದಾನೆ.

ಮಾಹಿತಿಯಂತೆ, ಆರೋಪಿ ಯುವತಿಯ ಮುಖಕ್ಕೆ ಏನೋ ಸ್ಪ್ರೇ ಮಾಡಿ ಆಕೆಯನ್ನು ಪ್ರಜ್ಞಾಹೀನಳಾಗಿಸಿದ್ದಾನೆ. ನಂತರ ಅತ್ಯಾಚಾರ ಎಸಗಿ, ಪರಾರಿಯಾಗುವ ಮುನ್ನ ಆಕೆಯ ಮೊಬೈಲ್‌ನಿಂದ ಸೆಲ್ಫಿ ತೆಗೆದು “ನಾನು ಮತ್ತೆ ಬರುತ್ತೇನೆ” ಎಂಬ ಬೆದರಿಕೆ ನೋಟನ್ನು ಬರೆದಿಟ್ಟು ಸ್ಥಳದಿಂದ ಓಡಿದಾನೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅತ್ಯಾಚಾರ, ಮಹಿಳೆಯ ಮೇಲೆ ಹಲ್ಲೆ ಹಾಗೂ ಕ್ರಿಮಿನಲ್ ಬೆದರಿಕೆ ಕುರಿತು ತನಿಖೆ ಮುಂದುವರೆಸಿದ್ದಾರೆ.

error: Content is protected !!