August 6, 2025
images

ಫರೀದಾಬಾದ್: ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗಲೇ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೆ ಒಳಗಿ ಸಾವನ್ನಪ್ಪಿದ ಘಟನೆ ಹರ್ಯಾಣದ ಫರೀದಾಬಾದ್‌ನಲ್ಲಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವುದನ್ನು ಇದು ಮತ್ತೊಮ್ಮೆ ಹತ್ತಿಕ್ಕಿಸಿದೆ.

ಹಾಸನ ಜಿಲ್ಲೆಯಲ್ಲಿ ಮಾತ್ರವೂ 25ಕ್ಕೂ ಹೆಚ್ಚು ಜನರು ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಫರೀದಾಬಾದ್‌ನಲ್ಲಿ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ಪಂಕಜ್ ಶರ್ಮಾ ಎಂಬವರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಬಲ್ಲಭಗಢದ ಜಿಮ್‌ನಲ್ಲಿ ಶರ್ಮಾ ತಮ್ಮ ಸ್ನೇಹಿತ ರೋಹಿತ್ ಜೊತೆಗೆ ವ್ಯಾಯಾಮ ಮಾಡುತ್ತಿದ್ದರು. ಸುಮಾರು 170 ಕೆಜಿ ತೂಕ ಹೊಂದಿದ್ದ ಶರ್ಮಾಗೆ ಜಿಮ್‌ನಲ್ಲಿ ಇದ್ದಾಗಲೇ ಹೃದಯಾಘಾತ ಸಂಭವಿಸಿದೆ. ಈ ಘಟನೆ ಜಿಮ್‌ನ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ದೃಶ್ಯಾವಳಿಗಳಲ್ಲಿ ಶರ್ಮಾ ನೆಲಕ್ಕುರುಳುವ ದೃಶ್ಯಗಳು ಕಂಡುಬರುತ್ತವೆ.

ವ್ಯಾಯಾಮ ಆರಂಭಿಸುವ ಮೊದಲು ಶರ್ಮಾ ಒಂದು ಲೋಟ ಕಾಫಿ ಸೇವಿಸಿದ್ದರು ಎನ್ನಲಾಗುತ್ತಿದೆ.

error: Content is protected !!