August 6, 2025
WhatsApp Image 2025-03-25 at 12.22.02 PM

ಉಡುಪಿ: ವಿದ್ಯಾರ್ಥಿಯೊಬ್ಬನು ದೈವಕ್ಕೆ ಪತ್ರ ಬರೆದು “ನನ್ನನ್ನು ಜಸ್ಟ್ ಪಾಸ್ ಮಾಡು ಸಾಕು” ಎಂದು ಮನವಿ ಮಾಡಿಕೊಂಡ ಅಪರೂಪದ ಘಟನೆ ಕುಂದಾಪುರದಲ್ಲಿ ನಡೆದಿರುವುದು ಎಲ್ಲರಲ್ಲೂ ಕುತೂಹಲ ಹುಟ್ಟಿಸಿದೆ.

ಕುಂದಾಪುರದ ಹೊಳಮಗ್ಗಿ ಹೊರ ಬೊಬ್ಬರ್ಯ ದೇಗುಲದ ಕಾಣಿಕೆ ಹುಂಡಿಯಲ್ಲಿ ಹಣ ಲೆಕ್ಕಾಚಾರ ಮಾಡುವ ವೇಳೆ ಈ ಅಚ್ಚರಿಯ ಪತ್ರ ಕಂಡುಬಂದಿದೆ.

ಪರೀಕ್ಷೆ ಎಂಬುದು ಬಹುತೇಕ ವಿದ್ಯಾರ್ಥಿಗಳಿಗೆ ಒತ್ತಡ ಉಂಟುಮಾಡುವ ವಿಷಯ. ಕಲಿಕೆಯಲ್ಲಿ ಮುಂದಿರುವ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯಲು ಆಶಿಸುವರೆಂದರೆ, ಕೆಲ ಸೋಮಾರಿಗಳಂತು “ಜಸ್ಟ್ ಪಾಸ್ ಆದರೂ ಸಾಕು” ಎಂಬ ಆಶಯ ಪೋಷಿಸುತ್ತಾರೆ. ಈ ರೀತಿಯ ಯೋಚನೆ ಹೊಂದಿದ್ದ ಒಬ್ಬ ವಿದ್ಯಾರ್ಥಿ, ದೈವದ ಮುಂದೆ ವಿಶೇಷ ಪ್ರಾರ್ಥನೆ ಮಾಡಿದ್ದು, ತನ್ನ ಪ್ರತಿ ವಿಷಯಕ್ಕೆ ಅಗತ್ಯ ಅಂಕಗಳನ್ನು ಸೂಚಿಸಿ, “ಇದರಿಗಿಂತ ಕಡಿಮೆ ಅಂಕ ಬೇಡವೇ ಬೇಡ” ಎಂದು ಮನವಿ ಸಲ್ಲಿಸಿದ್ದಾನೆ.

ಈ ಅಚ್ಚರಿಯ ಮನವಿ ಪತ್ರ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಜನರು ಇದನ್ನು ಹುಮ್ಮಸ್ಸಿನಿಂದ ಹಂಚಿಕೊಳ್ಳುತ್ತಿದ್ದಾರೆ.

error: Content is protected !!