August 6, 2025
Screenshot_20250612_1114022

ಬ್ರಹ್ಮಾವರ: ಮೀನಿಗೆ ಗಾಳ ಹಾಕುವುದಾಗಿ ಮನೆಯಿಂದ ಹೋದ ಯುವಕ ನಾಪತ್ತೆ

ಉಡುಪಿ ಜಿಲ್ಲೆ ಬ್ರಹ್ಮಾವರ ಸಮೀಪದ ನಾಲ್ಕೂರು ಗ್ರಾಮದ ಯುವಕನೊಬ್ಬ ಮೀನಿಗೆ ಗಾಳ ಹಾಕುವುದಾಗಿ ಮನೆಯಿಂದ ಹೊರಟು ನಂತರ ವಾಪಸ್‌ ಬಾರದೆ ನಾಪತ್ತೆಯಾಗಿರುವ ಘಟನೆ ನಡೆದಿದ್ದು, ಸಂಬಂಧಿಕರಲ್ಲಿ ಆತಂಕ ಉಂಟುಮಾಡಿದೆ.

ನಾಪತ್ತೆಯಾದ ಯುವಕನನ್ನು ನಾಲ್ಕೂರು ನಿವಾಸಿ ಕೃಷ್ಣ ಅವರ 24 ವರ್ಷದ ಪುತ್ರ ಗಣೇಶ ಎಂದು ಗುರುತಿಸಲಾಗಿದೆ. ಗಣೇಶನು ಶ್ರಿರಾಜ್ ಬಸ್ಸಿನಲ್ಲಿ ಕಂಡಕ್ಟರ್‌ ಆಗಿ ಕೆಲಸ ಮಾಡುತ್ತಿದ್ದು, ಘಟನೆ ಸಂಭವಿಸಿದ ದಿನವಾದ 10/06/2025ರಂದು ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದನು.

ಸಂದ್ಯಾ 8:00 ಗಂಟೆ ಸುಮಾರಿಗೆ ಪಿರ್ಯಾದಿದಾರರಾದ ಕೃಷ್ಣ ಮನೆಗೆ ಮೀನಿನ ವ್ಯಾಪಾರ ಮುಗಿಸಿಕೊಂಡು ಬಂದಾಗ ಮಗ ಮನೆಗೆ ಬಂದಿಲ್ಲವೆಂದು ಗಮನಿಸಿದವರು, ರಾತ್ರಿ 10:30ರ ವೇಳೆಗೆ ಗಣೇಶನ ಗೆಳೆಯರಾದ ಸೂರ್ಯ ಮತ್ತು ಸುದೀಪ್‌ ಮನೆಗೆ ಬಂದು, ಗಣೇಶನು ಮನೆಗೆ ಬಂದಿದ್ದಾನೆಯೆಂದು ಕೇಳಿದರು. ಪಿರ್ಯಾದಿದಾರರು ಅಲ್ಲಿಲ್ಲವೆಂದು ತಿಳಿಸಿದಾಗ, ಗೆಳೆಯರು ವಿವರಿಸಿದಂತೆ ಗಣೇಶನು ಸಂಜೆ 6:30ರ ಸುಮಾರಿಗೆ ಸೀತಾ ನದಿಯ ಕೊಕ್ಕರ್ಣೆ ಬ್ರಿಡ್ಜ್‌ ಹತ್ತಿರದ ಮೋಗವೀರ ಪೇಟೆ ದೇವಸ್ಥಾನ ಬಳಿ ಮೀನಿಗೆ ಗಾಳ ಹಾಕಲು ಬಂದಿದ್ದ.

ಸೂರ್ಯ ಮತ್ತು ಸುದೀಪ್‌ ಅವರ ಹೇಳಿಕೆಯಂತೆ, 7:50ರ ವೇಳೆಗೆ ಗಣೇಶನು ಗಾಳೆಗೆ ಬಳಸುವ ಕೋಳಿ ಕರಳನ್ನು ತರುವುದಾಗಿ ಹೇಳಿ ಕೊಕ್ಕರ್ಣೆ ಪೇಟೆಗೆ ತೆರಳಿದ್ದು, ನಂತರ ಆ ಕರಳನ್ನು ಸ್ನೇಹಿತರಿಗೆ ನೀಡಿದನು. ಬಳಿಕ, ತಾನು ಮುಂದೆ ಹೋಗಿ ಗಾಳ ಹಾಕುವುದಾಗಿ ಹೇಳಿ ಸುದೀಪನ ಬೈಕ್ ತೆಗೆದುಕೊಂಡು ತೆರಳಿದನು.

ಆತನನ್ನು ಹಲವು ಬಾರಿ ಮೊಬೈಲ್‌ ಮೂಲಕ ಸಂಪರ್ಕಿಸಲು ಯತ್ನಿಸಿದರೂ, ಫೋನ್‌ ಸ್ವಿಚ್‌ ಆಫ್‌ ಆಗಿತ್ತು. ನಂತರ ಹುಡುಕಾಡಿದಾಗ, ಕೊಕ್ಕರ್ಣೆ ಪೇಟೆಯಿಂದ ಸುಮಾರು 1 ಕಿಮೀ ದೂರದಲ್ಲಿ ಸುದೀಪನ ಬೈಕ್ ರಸ್ತೆ ಪಕ್ಕ ನಿಲ್ಲಿಸಿದ್ದದು ಕಂಡುಬಂದಿತು. ಅಲ್ಲಿನ ಸಮೀಪ ಹುಡುಕಿದಾಗ, ಗಾಳ ಹಾಕಲು ಬಳಸಿದ ನೂಲು ಹಾಗೂ ಕೋಳಿ ಕರಳು ಬಂಡೆಯ ಮೇಲೆ ಪತ್ತೆಯಾಗಿದ್ದು, ಗಣೇಶನ ಬಗ್ಗೆ ಯಾವುದೇ ಮಾಹಿತಿ ಲಭಿಸಲಿಲ್ಲ.

ಪೋಷಕರೂ ಸಹ ಎಲ್ಲಾ ಕಡೆ ಹುಡುಕಾಡಿದರೂ ಕೂಡ ಆತನ ಪತ್ತೆಯಾಗಿಲ್ಲ. ಗಣೇಶನು ಮನೆಗೂ ಅಥವಾ ಯಾವುದೇ ಸಂಬಂಧಿಕರ ಮನಕ್ಕೂ ತೆರಳಿಲ್ಲ. ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 128/2025, ಕಲಂ ‘ಗಂಡಸು ಕಾಣೆ’ ಅಡಿಯಲ್ಲಿ ದಾಖಲಿಸಲಾಗಿದೆ.

error: Content is protected !!