August 5, 2025
Screenshot_20250716_1931252-640x702

ಕುಂದಾಪುರ: ಜುಲೈ 15ರಂದು ಬೆಳಿಗ್ಗೆ ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ, ಸಮುದ್ರದಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿದ ಪರಿಣಾಮ ನಾಲ್ವರು ಮೀನುಗಾರರು ಸಮುದ್ರಪಾಲಾಗಿದ್ದರು.

ಈ ದುರ್ಘಟನೆಗೆ ಸಂಬಂಧಿಸಿದಂತೆ ಇಂದು (ಬುಧವಾರ) ಬೆಳಿಗ್ಗೆ ಲೋಹಿತ್ ಖಾರ್ವಿ (38) ಎಂಬವರ ಮೃತದೇಹವು ಕೋಡಿ ಲೈಟ್‌ಹೌಸ್ ಬಳಿಯ ತೀರದಲ್ಲಿ ಪತ್ತೆಯಾಗಿದೆ.

ಇನ್ನೂ ಇಬ್ಬರು ನಾಪತ್ತೆಯಾದ ಮೀನುಗಾರರು – ಜಗನ್ನಾಥ ಖಾರ್ವಿ ಮತ್ತು ಸುರೇಶ್ ಖಾರ್ವಿ – ಇವರುಗಳ ಪತ್ತೆಗಾಗಿ ಶೋಧ ಕಾರ್ಯಚರಣೆ ಮುಂದುವರಿದಿದೆ.

ಈ ದುರಂತದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಮೀನುಗಾರ ಸಂತೋಷ್ ಖಾರ್ವಿ ಸಮುದ್ರದಲ್ಲಿ ಈಜಿ ಬದುಕುಳಿದು ದಡ ಸೇರುವಲ್ಲಿ ಯಶಸ್ವಿಯಾದರು.

error: Content is protected !!