August 5, 2025
IMG-20250805-WA0310

ಬೆಂಗಳೂರು: ಸಿಕ್ ಅಚ್ಚುಕಟ್ಟು ಪ್ರದೇಶದಲ್ಲಿ 7ನೇ ತರಗತಿಯ 14 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಅವನು ಡೆತ್ ನೋಟ್ ಬರೆದಿಟ್ಟಿದ್ದಾನೆ.

Forgive Me. ನಾನು ಮಾಡಿದ ಪಾಪ ಮತ್ತು ತಪ್ಪನ್ನು ಕ್ಷಮಿಸಿ. ದಯವಿಟ್ಟು ಅಳಬೇಡಿ. ನಾನು ಈಗಾಗಲೇ ಸ್ವರ್ಗದಲ್ಲಿ ಖುಷಿಯಾಗಿದ್ದೇನೆ. ಮನೆ ಚೆನ್ನಾಗಿ ಇರಲಿ ಎಂಬುದಕ್ಕಾಗಿಯೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನನಗೆ ಗೊತ್ತು, ನಿಮಗೆ ಕೋಪ ಬರುವಂತೆ ಮಾಡಿದ್ದೇನೆ. ಆದರೆ ನನ್ನ ಉದ್ದೇಶ ಸಾವು ಅಲ್ಲ. ದಯವಿಟ್ಟು ನನ್ನನ್ನು ಮನ್ನಿಸಿ. 14 ವರ್ಷಗಳ ಕಾಲ ನಾನು ಸುಖವಾಗಿದ್ದೆ. ಈಗ ಸ್ವರ್ಗದಲ್ಲಿ ತುಂಬಾ ಸಂತೋಷದಲ್ಲಿದ್ದೇನೆ. ನನ್ನ ಸ್ನೇಹಿತರಿಗೆಲ್ಲಾ ಹೇಳಿ, ನಾನು ಖುಷಿಯಾಗಿದ್ದೇನೆಂದು. ಗುಡ್ ಬಾಯ್, ಅಮ್ಮ” ಎಂದು ಬಾಲಕನ ಡೆತ್ ನೋಟ್‌ನಲ್ಲಿ ಬರೆದಿದ್ದ.

ಬಾಲಕನ ತಂದೆ-ತಾಯಿ ಇಬ್ಬರೂ ಕಲಾವಿದರು. ತಂದೆ ಗಣೇಶ್ ಪ್ರಸಾದ್ ಬೆಳಗ್ಗೆ ಮಗನ ಕೋಣೆಗೆ ಹೋಗಿ ನೋಡಿದಾಗ ಈ ದುರಂತ ಬೆಳಕಿಗೆ ಬಂತು.

error: Content is protected !!