
ಕೆಲ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕ್ರೈಸ್ತ ಧರ್ಮದ ಪರಮೋಚ್ಚ ನಾಯಕ ಹಾಗೂ ರೋಮನ್ ಕ್ಯಾಥೋಲಿಕ್ ಚರ್ಚ್‌ನ ಪೋಪ್ ಫ್ರಾನ್ಸಿಸ್ ಅವರು ಇಂದು ತಮ್ಮ 88ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಈಸ್ಟರ್ ಸೋಮವಾರ, ಏಪ್ರಿಲ್ 21, 2025 ರಂದು, ವ್ಯಾಟಿಕನ್‌ನ ಕಾಸಾ ಸಾಂತಾ ಮಾರ್ಟಾದಲ್ಲಿರುವ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದರು.
ಈ ಸುದ್ದಿಯನ್ನು ವ್ಯಾಟಿಕನ್ ನ್ಯೂಸ್ ಅವರ ಅಧಿಕೃತ ಟ್ವಿಟ್ಟರ್ ಖಾತೆ ಮೂಲಕ ದೃಢಪಡಿಸಲಾಗಿದೆ. ಅಸೋಸಿಯೇಟೆಡ್ ಪ್ರೆಸ್ ನೀಡಿದ ವರದಿಯ ಪ್ರಕಾರ, ವ್ಯಾಟಿಕನ್‌ನ ಕ್ಯಾಮೆರ್ಲೆಂಗೊ ಕಾರ್ಡಿನಲ್ ಕೆವಿನ್ ಫಾರೆಲ್ ಅವರು ಈ ದುಃಖದ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಪೋಪ್ ಫ್ರಾನ್ಸಿಸ್ ಅವರ ಅಗಲಿಕೆಯಿಂದ ಜಗತ್ತಿನಾದ್ಯಂತದ ಕ್ರೈಸ್ತ ಸಮುದಾಯದಲ್ಲಿ ಆಳವಾದ ಶೋಕವಾತಾವರಣ ನಿರ್ಮಾಣವಾಗಿದೆ.