August 5, 2025
IMG-20250718-WA0022

ಕೊಲ್ಕತ್ತಾದಲ್ಲಿ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್‌ ರೇಪ್ ಆರೋಪದ ಸಂಬಂಧ ಬಾಗಲಕೋಟೆ ಮೂಲದ ವಿದ್ಯಾರ್ಥಿಯೊಬ್ಬನನ್ನು ಬಂಧಿಸಲಾಗಿದೆ.

ಬಂಧಿತನನ್ನು ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಲೋಕಾಪುರ ನಿವಾಸಿ ಪರಮಾನಂದ ಜೈನ್ ಎಂದು ಗುರುತಿಸಲಾಗಿದೆ. ಆತ ಐಐಎಂ ಕಾನೂನು ಕಾಲೇಜಿನಲ್ಲಿ ಪದವಿ ಕೊನೆಯ ವರ್ಷದಲ್ಲಿ ಶಿಕ್ಷಣ ಪಡೆದುತಿದ್ದ. ಜುಲೈ 12ರ ರಾತ್ರಿ ಪರಮಾನಂದನನ್ನು ಪೊಲೀಸರು ಬಂಧಿಸಿ ತಮ್ಮೊಂದಿಗೆ ಕರೆದೊಯ್ದಿದ್ದಾರೆ.

ಆರೋಪಗಳ ಪ್ರಕಾರ, ಹಾಸ್ಟೆಲಿಗೆ ವಿದ್ಯಾರ್ಥಿನಿಯೊಬ್ಬಳನ್ನು ಕರೆಸಿ, ಪಾನೀಯ ನೀಡಿದ ನಂತರ ಪರಮಾನಂದ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪಗಳು ಕೇಳಿ ಬಂದಿವೆ.

ಇನ್ನೊಂದೆಡೆ, ಯುವತಿಯ ಕುಟುಂಬಸ್ಥರು ಈ ಆರೋಪಗಳನ್ನು ತಳ್ಳಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ, ಮಗನ ಬಂಧನ ಕುರಿತು ಆಘಾತ ವ್ಯಕ್ತಪಡಿಸಿರುವ ಪರಮಾನಂದನ ತಾಯಿ ಹೇಳುವಂತೆ, “ಘಟನೆ ನಡೆದ ರಾತ್ರಿ ಸುಮಾರು 11 ಗಂಟೆ ಸುಮಾರಿಗೆ ಅವನ ಗೆಳೆಯನಿಂದ ಕರೆ ಬಂದಿತು. ನನ್ನ ಮಗನನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಗೊತ್ತಾಯಿತು. ನಾವು ಯಾಕೆ ಬಂಧನೆ ನಡೆದಿದೆ ಎಂಬ ಮಾಹಿತಿ ಪಡೆಯಲಿಲ್ಲ. ಅವನು ಓದಿಗಾಗಿ ದೂರವರೆಗೆ ಬಂದಿದ್ದ. ಅವನು ಮುಗ್ಧ ವ್ಯಕ್ತಿ; ಇಂತಹ ಅವಾಚ್ಯ ಕಾರ್ಯಗಳಲ್ಲಿ ಅವನು ತೊಡಗಿರುವ ಸಾಧ್ಯವೇ ಇಲ್ಲ” ಎಂದು ಹೇಳಿದ್ದಾರೆ.

error: Content is protected !!