
ಮಂಗಳೂರು: ಕೋಟ್ಯಂತರ ರುಪಾಯಿಗಳ ವಂಚನೆ – ಉದ್ಯಮಿಯಾಗಿ ನಟನಾಟ ಮಾಡಿದ್ದ ಆರೋಪಿಯ ಬಂಧನ!
ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮತ್ತು ಎಸಿಪಿ ರವೀಶ್ ನಾಯಕ್ ನೇತೃತ್ವದ ತಂಡವು ಗುರುವಾರ ತಡರಾತ್ರಿ ಪ್ರಮುಖ ಕಾರ್ಯಾಚರಣೆ ನಡೆಸಿ ಜಪ್ಪಿನಮೊಗರು ನಿವಾಸಿ ರೋಶನ್ ಸಲ್ಡಾನ (ವಯಸ್ಸು 45) ಎಂಬಾತನನ್ನು ಬಂಧಿಸಿದೆ. ಈತ ಹಲವು ಉದ್ಯಮಿಗಳು ಹಾಗೂ ಶ್ರೀಮಂತರನ್ನು ಲಕ್ಷ್ಯವಿಟ್ಟು ಕೋಟಿ ಕೋಟಿ ರುಪಾಯಿಗಳನ್ನು ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿಯು ತಾನೊಬ್ಬ ಪ್ರಭಾವಿ ಉದ್ಯಮಿ ಎಂಬ ನೆಪದಲ್ಲಿ ಹೊರಜಿಲ್ಲೆ ಹಾಗೂ ಹೊರರಾಜ್ಯದ ಶ್ರೀಮಂತ ವ್ಯಕ್ತಿಗಳನ್ನು ಜಮೀನಿನ ವ್ಯವಹಾರ ಹಾಗೂ ಸಾಲದ ಆಮಿಷದಲ್ಲಿ ಮೋಸಗೊಳಿಸುತ್ತಿದ್ದ. ಕೇವಲ ಮೂರೇ ತಿಂಗಳಲ್ಲಿ ಸುಮಾರು ₹45 ಕೋಟಿ ರುಪಾಯಿಗಳ ವ್ಯವಹಾರ ನಡೆಸಿರುವ ಮಾಹಿತಿ ಪತ್ತೆಯಾಗಿದೆ. ಪೊಲೀಸರ ಪ್ರಕಾರ, ಈತನ ವಂಚನೆ ದಾಳಿ ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿದ್ದು, ಒಟ್ಟು ₹200 ಕೋಟಿ ರುಪಾಯಿಗಳಿಗೂ ಅಧಿಕ ಮೊತ್ತವನ್ನು ವಂಚಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ರೋಶನ್ ಸಲ್ಡಾನನು ತನ್ನ ಜಪ್ಪಿನಮೊಗರುವಿನ ಐಷಾರಾಮಿ ಬಂಗಲೆಯಲ್ಲಿ ವ್ಯವಹಾರಕ್ಕಾಗಿ ಬಂದುಕೊಳ್ಳುವವರನ್ನು ಆಹ್ವಾನಿಸುತ್ತಿದ್ದ. ಇಲ್ಲಿಯೇ ಅವರು ನಂಬಿಕೆ ಮೂಡಿಸುತ್ತಿದ್ದ ಮತ್ತು ₹5 ಕೋಟಿ ರಿಂದ ₹100 ಕೋಟಿವರೆಗೆ ವ್ಯವಹಾರ ಮಾಡಲು ಒಪ್ಪುತ್ತಿದ್ದರು.
ಆರಂಭಿಕ ಮಾತುಕತೆಗಿಂತ ಮುಂದೆ, ಆತ ಉದ್ಯಮಿಗಳಿಂದ ₹5-₹10 ಕೋಟಿ ರುಪಾಯಿ ಮೌಲ್ಯದ ಸ್ಟ್ಯಾಂಪ್ ಡ್ಯೂಟಿ ಹಣವನ್ನು ಪಡೆಯುತ್ತಿದ್ದ. ನಂತರ ವ್ಯವಹಾರ ಮುಂದುವರಿದಂತೆ ನಟಿಸಿ, ನಿರೀಕ್ಷಿತ ಮೊತ್ತ ವಸೂಲಾದ ಬಳಿಕ ನಾನಾ ನೆಪಗಳನ್ನು ಹೇಳಿ ಸಂಪರ್ಕ ತಪ್ಪಿಸುತ್ತಿದ್ದ.
ಇನ್ನೊಂದು ಮಹತ್ವದ ಮಾಹಿತಿ ಎಂದರೆ, ಈತನಿಗೆ ಬಲಿಯಾದ ಕೆಲವರು ₹50 ಲಕ್ಷದಿಂದ ₹4 ಕೋಟಿ ರುಪಾಯಿವರೆಗೆ ನಷ್ಟ ಅನುಭವಿಸಿದ್ದಾರೆ. ಹಣ ಪಡೆದ ಬಳಿಕ, ಆರೋಪಿಯು ನಿಗೂಢವಾಗಿ ಮರೆಯಾಗುತ್ತಿದ್ದ.
ಐಷಾರಾಮಿ “ಮಾಯಾಲೋಕ”:
ಆರೋಪಿಯ ಮನೆಯಲ್ಲಿ ಪೊಲೀಸರು ದಾಳಿ ನಡೆಸಿದಾಗ, ದಂಗಾಗುವಂತಹ ದೃಶ್ಯಗಳು ಬೆಳಕಿಗೆ ಬಂದಿವೆ. ಮನೆಯಲ್ಲಿ ದುಬಾರಿ ಗಿಡಗಳು, ಅನೇಕ ಶ್ರೇಣಿಯ ಶಾಂಪೇನ್ ಹಾಗೂ ಮಾದಕ ಪಾನೀಯಗಳ ಸಂಗ್ರಹ ಇದ್ದು, ಒಳಗೆ ಸೆಕ್ಯುರಿಟಿ ಅಡಗು ಕೊಠಡಿಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳ ವ್ಯವಸ್ಥೆ ಇತ್ತು.
ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಶೀಲಿಸುತ್ತಿದ್ದು, ಇನ್ನಷ್ಟು ಬೇಧನೆ ನಡೆಯುತ್ತಿದೆ.