August 6, 2025
Screenshot_20250707_0009532-640x453

ಕೊಲ್ಲೂರು: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ

ಉಡುಪಿ ಜಿಲ್ಲೆಯ ಕೊಲ್ಲೂರು ಸಮೀಪದ ಚಿತ್ತೂರು ಗ್ರಾಮದಲ್ಲಿ ತೆಂಗಿನಕಾಯಿ ಕೊಯ್ಯುವ ವೇಳೆ ವ್ಯಕ್ತಿಯೊಬ್ಬರು ತೆಂಗಿನ ಮರದಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ನಡೆದಿದೆ.

ಮೃತ ವ್ಯಕ್ತಿಯನ್ನು ರಾಜೇಶ್ (47) ಎಂದು ಗುರುತಿಸಲಾಗಿದೆ.

ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದ ರಾಜೇಶ್ ಅವರು ಕೃಷಿ ಕೂಲಿ ಕೆಲಸ ಮಾಡಿಕೊಂಡಿದ್ದವರು. ಮೇ 13, 2025 ರಂದು ಬೆಳಿಗ್ಗೆ ಸುಮಾರು 9 ಗಂಟೆಗೆ ಚಿತ್ತೂರು ಗ್ರಾಮದ ಮಾರಣಕಟ್ಟೆಯ ಮಹಾಬಲೇಶ್ವರ ಅವರ ಮನೆಯಲ್ಲಿ ತೆಂಗಿನಕಾಯಿ ಕೊಯ್ಯುವಾಗ ಆಯತಪ್ಪಿ ಮರದಿಂದ ಕೆಳಗೆ ಬಿದ್ದರು. ಈ ದುರ್ಘಟನೆಯಲ್ಲಿ ಅವರ ಕುತ್ತಿಗೆಗೆ ಗಂಭೀರ ಗಾಯವಾಗಿದ್ದು, ದೇಹದ ಇತರೆ ಭಾಗಕ್ಕೂ ಪೆಟ್ಟಾಗಿತ್ತು.

ತಕ್ಷಣವೇ ಅವರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆ, ನಂತರ ಉಡುಪಿ ಜಿಲ್ಲಾ ಆಸ್ಪತ್ರೆಗೆ ಮತ್ತು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಜುಲೈ 6, 2025 ರಂದು ಬೆಳಗ್ಗೆ 5:08 ಗಂಟೆಗೆ ಅವರು ಮೃತಪಟ್ಟರು.

ಈ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 14/2025 ಕಲಂ 194 BNSS ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!