
ಮಲ್ಪೆ: ಮಾರ್ಚ್ 21ರಂದು ಕೆಳಾರ್ಕಳಬೆಟ್ಟು ಸಂತೆಕಟ್ಟೆ ಬಳಿ, ಮಗುವನ್ನು ಎತ್ತಿಕೊಂಡು ರಸ್ತೆ ಮೂಲಕ ಹೋಗುತ್ತಿದ್ದ ಮಹಿಳೆಯ ಚೀಲದಿಂದ ಬೈಕಿನಲ್ಲಿ ಬಂದ ವ್ಯಕ್ತಿಯೊಬ್ಬರು ಮೊಬೈಲ್ ಮತ್ತು ₹2,500 ನಗದು ಕಸಿದು ಪರಾರಿಯಾದ ಘಟನೆ ನಡೆದಿದೆ.
ಸಂತ್ರಸ್ತೆ ಬಾಗಲಕೋಟೆ ಜಿಲ್ಲೆಯ ಸರಸ್ವತಿ ಎಂಬುವವರು ನೀಡಿದ ದೂರಿನಂತೆ, ಆರೋಪಿ ಕೆಮ್ಮಣ್ಣು ಕಡೆಗೆ ಪರಾರಿಯಾದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಮಲ್ಪೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿದೆ.