
ಕುಂದಾಪುರ: ಗಂಗೊಳ್ಳಿಯಲ್ಲಿ ನಾಡದೋಣಿಯ ಮಗುಚು – ಮೂವರು ಮೀನುಗಾರರು ನೀರುಪಾಲು
ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ ದಾರುಣ ಘಟನೆ ಸಂಭವಿಸಿದೆ. ಮೀನುಗಾರಿಕೆಗೆ ತೆರಳಿದ್ದ ನಾಡದೋಣಿಯೊಂದು ಅಲೆಗಳ ರಭಸಕ್ಕೆ ಮಗುಚಿ ಮೂವರು ಮೀನುಗಾರರು ನೀರುಪಾಲಾದರು.
ನೀರುಪಾಲಾದವರು ಗಂಗೊಳ್ಳಿಯ ಸುರೇಶ್ ಖಾರ್ವಿ (48), ಗಂಗೊಳ್ಳಿ ಬೇಲಿಕೆರಿಯ ರೋಹಿತ್ ಖಾರ್ವಿ (35), ಮತ್ತು ಮಲ್ಯಾರುಬೆಟ್ಟುವಿನ ಜಗದೀಶ್ ಖಾರ್ವಿ (50) ಎಂದು ಗುರುತಿಸಲಾಗಿದೆ.
ಮಂಗಳವಾರ ಮುಂಜಾನೆ ಸಿಪಾಯಿಬಸುರೇಶ್ ಮಾಲೀಕತ್ವದ ನಾಡದೋಣಿಯಲ್ಲಿ ನಾಲ್ವರು ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಸಮುದ್ರದ ಸ್ಥಿತಿ ಹಠಾತ್ ಪ್ರಕ್ಷುಬ್ದಗೊಂಡಿದ್ದು, ಅಪಾಯದ ಆತಂಕದಿಂದಾಗಿ ಅವರು ತಕ್ಷಣವೇ ದಡದತ್ತ ಮರುಗಮನೆ ಆರಂಭಿಸಿದರು. ಆದರೆ ಈ ನಡುವೆ ನಾಡದೋಣಿಯು ಮಗುಚಿ ನಾಲ್ವರೂ ನೀರಿನಲ್ಲಿ ಬಿದ್ದರು.
ಅವರಲ್ಲಿ ಒಬ್ಬರು ಈಜುತ್ತಾ ಸಮೀಪದ ಮತ್ತೊಂದು ದೋಣಿಗೆ ತಲುಪಿದ್ದು ಅಪಾಯದಿಂದ ಪಾರಾಗಿದ್ದಾರೆ. ಉಳಿದ ಮೂವರಿಗಾಗಿ ತಕ್ಷಣವೇ ತೀವ್ರ ಶೋಧ ಕಾರ್ಯಾಚರಣೆ ಆರಂಭವಾಗಿದೆ.