August 6, 2025
napatthe-300x200-1

ಕುಂದಾಪುರ: ಕೋಡಿ ಸೇತುವೆ ಪ್ರಕರಣಕ್ಕೆ ಡ್ರಾಮಾಟಿಕ್ ಟ್ವಿಸ್ಟ್ – ನದಿಗೆ ಹಾರಿಲ್ಲ, ಪ್ರೇಮಿಯೊಂದಿಗೆ ಪರಾರಿಯಾಗಿದ್ದ ಮಹಿಳೆ

ಕುಂದಾಪುರದ ಚರ್ಚ್ ರಸ್ತೆಯ ಕೋಡಿ ಸೇತುವೆ ಬಳಿ ತನ್ನ ಸ್ಕೂಟಿಯನ್ನು ನಿಲ್ಲಿಸಿ ನಾಪತ್ತೆಯಾಗಿದ್ದ ಎರಡು ಮಕ್ಕಳ ತಾಯಿ ಹೀನಾ ಕೌಸರ್ ಪ್ರಕರಣದಲ್ಲಿ ಅಚ್ಚರಿ ಮೂಡುವಂತಹ ಬೆಳವಣಿಗೆ ನಡೆದಿದೆ.

ವಡೇರ ಹೋಬಳಿ ಗ್ರಾಮದ ವಿಠಲವಾಡಿ ನಿವಾಸಿಯಾದ ಹೀನಾ ಕೌಸರ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಮೊಟ್ಟಮೊದಲು ಶಂಕೆ ವ್ಯಕ್ತವಾಗಿತ್ತು. ಸೇತುವೆ ಮೇಲೆ ಆಕೆಯ ಸ್ಕೂಟಿ, ಡೆತ್ ನೋಟ್ ಮತ್ತು ಚಪ್ಪಲಿಗಳು ಪತ್ತೆಯಾಗಿದ್ದವು.

ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೆ ಕುಂದಾಪುರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನದಿಯಲ್ಲಿ ದೋಣಿಯ ಮೂಲಕ ಹರಹು ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಆದರೆ ಇದೀಗ ಬಂದಿರುವ ಮಾಹಿತಿಯ ಪ್ರಕಾರ, ಹೀನಾ ಆತ್ಮಹತ್ಯೆ ಮಾಡಿಕೊಂಡಿಲ್ಲ. ಬದಲಾಗಿ, ಕುಂದಾಪುರದ ಫುಡ್ ಮಾರ್ಕ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ವ್ಯಕ್ತಿ ಸಾಹಿಲ್ (27) ಜೊತೆ ಪರಾರಿಯಾಗಿರುವುದು ಗೊತ್ತಾಗಿದೆ. ಹೀನಾ ಕೌಸರ್ (33) ಇಬ್ಬರು ಮಕ್ಕಳ ತಾಯಿ ಮತ್ತು ಪರಿ ದೇಶದಲ್ಲಿರುವ ಪತಿಯ ಹೆಂಡತಿಯೂ ಹೌದು.

ಹೀನಾ ಮತ್ತು ಸಾಹಿಲ್ ಇಬ್ಬರೂ ಇತ್ತೀಚೆಗೆ ನಾಪತ್ತೆಯಾಗಿದ್ದು, ಈ ಸಂಬಂಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

error: Content is protected !!