
ಕುಂದಾಪುರ: ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ
ಉಡುಪಿ ಜಿಲ್ಲೆಯ ಕುಂದಾಪುರದ ತಲ್ಲೂರು ಗ್ರಾಮದಲ್ಲಿ ವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮೃತಪಟ್ಟ ಮಹಿಳೆ ಪವಿತ್ರ (37) ಎಂದು ಗುರುತಿಸಲಾಗಿದೆ.
ಪವಿತ್ರಳ ತಾಯಿ ಸುಮತಿ (60), ಬ್ರಹ್ಮಾವರ ತಾಲ್ಲೂಕಿನ ವಾರಂಬಳ್ಳಿ ಗ್ರಾಮದ ನಿವಾಸಿ, ಪಿರ್ಯಾದಿಯಲ್ಲೀ ತಿಳಿಸಿರುವಂತೆ – ಪವಿತ್ರಳನ್ನು 2016ರಲ್ಲಿ ಉಪ್ಪಿನಕುದ್ರುವಾಸಿ ಶೇಷಗಿರಿ ಅವರ ಮಗ ಶ್ರೀಧರ್ ಅವರೊಂದಿಗೆ ಮದುವೆ ಮಾಡಲಾಗಿತ್ತು. ಅವರಿಗೆ ಎರಡೆರಡು ವರ್ಷದ ಶಿವನ್ಯ ಎಂಬ ಹೆಣ್ಣು ಮಗು ಇತ್ತು.
ಸುಮಾರು ಮೂರು ವರ್ಷಗಳ ಹಿಂದೆ ಪವಿತ್ರ ತನ್ನ ಗಂಡ ಹಾಗೂ ಮಗಳೊಂದಿಗೆ ತಲ್ಲೂರು ಗ್ರಾಮದ ಕರುಣಾಕರ ಅವರ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಜುಲೈ 26, 2025ರಂದು ಪವಿತ್ರ ತನ್ನ ತಾಯಿಗೆ ಕರೆ ಮಾಡಿ, “ಬೆಳ್ತಿಗೆ ಅಕ್ಕಿ, ತುಪ್ಪ, ಸ್ಯಾವಿಗೆ ಅಚ್ಚು ತಯಾರಿಸಿ ಇಡು, ಗಂಡನನ್ನು ಕಳಿಸುತ್ತೇನೆ” ಎಂದು ತಿಳಿಸಿದ್ದಳು. ಆದ್ದರಿಂದ ಪಿರ್ಯಾದಿದಾರರು ತಯಾರಿ ಮಾಡಿದರು.
ಆದರೆ ಜುಲೈ 27, 2025ರಂದು ಮಧ್ಯಾಹ್ನ 3 ಗಂಟೆಗೆ ಪವಿತ್ರಳಿಗೆ ಕರೆ ಮಾಡಿದಾಗ, ಕರೆಯನ್ನು ಒಬ್ಬ ಮಹಿಳೆ ಸ್ವೀಸಿ, “ಪವಿತ್ರಳನು ಕುತ್ತಿಗೆಗೆ ಬಳ್ಳಿ ಹಾಕಿಕೊಂಡಿದ್ದಾಳೆ, ತಕ್ಷಣ ಬನ್ನಿ” ಎಂದು ತಿಳಿಸಿದರು. ತಕ್ಷಣ ವಾರಂಬಳ್ಳಿಯಿಂದ ತಲ್ಲೂರಿಗೆ ಬಂದು ನೋಡಿದಾಗ ಪವಿತ್ರ ಕಬ್ಬಿಣದ ಹುಕ್ಕಿಗೆ ಶಾಲು ಕಟ್ಟಿಕೊಂಡು ನೇಣಿಗೆ ಶರಣಾಗಿದ್ದಳು.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಗಂಡ ಮತ್ತು ಹೆಂಡತಿಯ ನಡುವೆ ನಿತ್ಯ ಜಗಳ ನಡೆಯುತ್ತಿದ್ದ ಬಗ್ಗೆ ಪವಿತ್ರ ಮಾತನಾಡಿದಾಗ ಪಿರ್ಯಾದಿದಾರರಿಗೆ ಅನಿಸುತ್ತಿತ್ತು ಎಂದು ಹೇಳಲಾಗಿದೆ. ಪವಿತ್ರ ಜುಲೈ 27ರಂದು ಮಧ್ಯಾಹ್ನ 3:00ರಿಂದ 3:05ರ ಮಧ್ಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್. ಸಂಖ್ಯೆ 40/2025, BNSS ಸೆಕ್ಷನ್ 194ರಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.