August 6, 2025
Screenshot_20250625_1924202-640x405

ಕುಂದಾಪುರ: ಇಲ್ಲಿನ ವಿಠಲವಾಡಿ ನಿವಾಸಿ ಹೀನಾ ಕೌಸರ್ (32) ನಾಪತ್ತೆಯಾಗಿದ್ದರಿಂದಾಗಿ ಮನೆಯವರು ಚಿಂತೆಗೊಂಡಿದ್ದರು. ಆದರೆ, ಅವರು ಸುರಕ್ಷಿತವಾಗಿ ತಮ್ಮ ಮನೆಗೆ ಮರಳಿದ್ದಾರೆ.

ಜೂನ್ 10 ರಂದು ಕೋಡಿ ಸೇತುವೆ ಬಳಿ ಹೀನಾಗೆ ಸೇರಿದ ಸ್ಕೂಟರ್, ಚಪ್ಪಲಿ ಮತ್ತು ಡೆತ್ ನೋಟ್ ಪತ್ತೆಯಾಗಿತ್ತು. ಇದರಿಂದಾಗಿ ಮನೆಯವರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆಕೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ಇದ್ದರೂ ಯಾವುದೇ ಸುಳಿವು ದೊರೆಯದ ಸ್ಥಿತಿಯಲ್ಲಿದ್ದವು.

ಇತ್ತ ಮಧ್ಯೆ, ಸೋಮವಾರ ಹೀನಾ ಸ್ವತಃ ಮನೆಗೆ ಹಿಂದಿರುಗಿ, ತನ್ನ ಕಥೆಯನ್ನು ಪೊಲೀಸರಿಗೆ ವಿವರಿಸಿದ್ದಾರೆ. ಹೀನಾಳ ಮಾತುಗಳ ಪ್ರಕಾರ, ಅಬಿದಾ ಎಂಬ ಮಹಿಳೆಯ ಟಾರ್ಚರ್‌ನಿಂದಾಗಿ ಅವರು ಡಿಪ್ರೆಶನ್‌ಗೆ ಒಳಗಾಗಿದ್ದರು. ಆ ಕಾರಣದಿಂದ ಆತ್ಮಹತ್ಯೆಗೆ ಮುಂದಾಗಿದ್ದೆ. ಬೆಳ್ಳಂಬೆಳಿಗ್ಗೆ ಕೋಡಿ ಸೇತುವೆಗೆ ಹೋಗಿ ನದಿಗೆ ಜಿಗಿಯಲು ಯತ್ನಿಸಿದ್ದೆ. ಆದರೆ ಅಲ್ಲಿ ಮೀನುಗಾರರು ಇದ್ದ ಕಾರಣ ಮನಸ್ಸು ಬದಲಿಸಿ ಮಂಗಳೂರಿಗೆ ಹೋಗಿ, ಅಲ್ಲಿಂದ ಉಳ್ಳಾಲ ದರ್ಗಾ ಸೇರಿಕೊಂಡೆ ಎಂದು ಹೇಳಿದ್ದಾರೆ.

ಸಾಹಿಲ್ ಎಂಬಾತ ನಾಪತ್ತೆಯಾದ ಪ್ರಕರಣಕ್ಕೂ ಹೀನಾಳಿಗೂ ಯಾವುದೂ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. “ಅವನು ಎಲ್ಲಿದ್ದಾನೆ ಅಂತ ನನಗೆ ಗೊತ್ತಿಲ್ಲ” ಎಂದು ಅವರು ಉತ್ತರಿಸಿದ್ದಾರೆ.

ಇನ್ನೊಂದೆಡೆ, ನಾಪತ್ತೆಯಾಗಿದ್ದ ಹೆಮ್ಮಾಡಿಯ ಸಾಹಿಲ್ ಕೂಡ ಈಗ ಮನೆಗೆ ವಾಪಸಾಗಿರುವುದಾಗಿ ಮಾಹಿತಿ ದೊರೆತಿದೆ.

error: Content is protected !!