April 29, 2025
IMG-20250424-WA0010-800x450

ಪಹಲ್ಗಾಮ್ ಉಗ್ರ ದಾಳಿಯ ಬಳಿಕ, ಜಮ್ಮು-ಕಾಶ್ಮೀರದಲ್ಲಿ ಮತ್ತೊಂದು ಭಯೋತ್ಪಾದಕ ದಾಳಿಯ ಪರಿಣಾಮವಾಗಿ ಒಬ್ಬ ಯೋಧ ಹುತಾತ್ಮರಾಗಿರುವ ಘಟನೆ ವರದಿಯಾಗಿದೆ.

ಜಮ್ಮು-ಕಾಶ್ಮೀರದ ಉದಯ್‌ಪುರದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಭಯೋತ್ಪಾದಕರ ದಾಳಿಗೆ ಒಬ್ಬ ಯೋಧ ಬಲಿಯಾಗಿದ್ದಾರೆ.

ಇಂದು ಉಧಂಪುರ್‌ನ ಬಸಂತ್‌ಗಢ ಪ್ರದೇಶದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸೇನೆಯೊಂದಿಗೆ ಜಂಟಿಯಾಗಿ ಕಾರ್ಯಾಚರಣೆಯನ್ನು ಆರಂಭಿಸಿದರು. ಈ ವೇಳೆ ಭಯೋತ್ಪಾದಕರೊಂದಿಗೆ ಸಂಪರ್ಕ ಸ್ಥಾಪನೆಯಾಯಿತು ಮತ್ತು ತೀವ್ರ ಗುಂಡಿನ ಚಕಮಕಿ ನಡೆಯಿತು. ಆರಂಭಿಕ ಎನ್‌ಕೌಂಟರ್‌ನಲ್ಲೇ ನಮ್ಮ ಧೈರ್ಯವಂತ ಯೋಧನೊಬ್ಬ ಗಂಭೀರವಾಗಿ ಗಾಯಗೊಂಡರು ಮತ್ತು ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ನೀಡಲಾಗಿದ್ರೂ ಅವರು ಬದುಕುಳಿಯಲಿಲ್ಲ. ಈ ಸಂದರ್ಭ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.

error: Content is protected !!