
ಕಾರ್ಕಳ: ರಸ್ತೆ ದಾಟುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ – ಚಿಕಿತ್ಸೆ ಫಲಕಾರಿಯಾಗದೆ ಸಾವು
ಉಡುಪಿ ಜಿಲ್ಲೆಯ ಕಾರ್ಕಳ–ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ದುರ್ಘಟನೆ ಸಂಭವಿಸಿ ಮಹಿಳೆಯೊಬ್ಬರು ಮೃತರಾಗಿರುವ ಘಟನೆ ಜೂನ್ 15ರಂದು ನಡೆದಿದೆ. ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ವೀಣಾ (59) ಎಂಬವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ನಿಟ್ಟೆ ಗ್ರಾಮದ ದೂಪದಕಟ್ಟೆಯಲ್ಲಿರುವ ಗುಲಾಬಿ ಹೋಟೆಲ್ ಎದುರು ಭಾಗದಲ್ಲಿ, ರಸ್ತೆಯ ಇನ್ನೊಂದು ಬದಿಗೆ ಹೋಗಲು ಕಾಯುತ್ತಿದ್ದ ವೇಳೆ ಕಾರು (ಸಂಖ್ಯೆ KA-51-MK-3318) ನಿಟ್ಟೆಯಿಂದ ಕಾರ್ಕಳ ಕಡೆಗೆ ಅತಿವೇಗವಾಗಿ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಪಿರ್ಯಾದಿದಾರ ರಮಾನಂದರ (64), ಕಾರ್ಕಳ ಕಸಬಾ ಗ್ರಾಮದವರ ಮಗಳ ಅತ್ತೆ ವೀಣಾ ಅವರಿಗೆ ಕಾರು ಢಿಕ್ಕಿ ಹೊಡೆದಿದ್ದು, ತಲೆಗೆ ಗಂಭೀರ ಗಾಯಗಳಾಗಿತ್ತು.
ಅವರನ್ನು ತಕ್ಷಣ ಕಾರ್ಕಳ ಪ್ರತಿಮಾ ನರ್ಸಿಂಗ್ ಹೋಂ ಹಾಗೂ ನಂತರ ಟಿ.ಎಂ.ಎ. ಪೈ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ, ಅವರು ಮಧ್ಯಾಹ್ನ 2:25ರ ವೇಳೆಗೆ ಮೃತಪಟ್ಟಿದ್ದಾರೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.