
ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಹಿರ್ಗಾನ ಗ್ರಾಮದ ಸಮೀಪ ಭಯಾನಕ ಘಟನೆ ಸಂಭವಿಸಿದ್ದು, ಗಂಡನೊಬ್ಬ ಪತ್ನಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ವರದಿಯಾಗಿದೆ.
ಪತ್ನಿ ಸುರೇಖಾ (44) ಎಂಬವರ ಮೇಲೆ ಕತ್ತಿಯಿಂದ ಗೋಪಾಲಕೃಷ್ಣ (60) ಎಂಬವರು ಹಲ್ಲೆ ನಡೆಸಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಲ್ಲೆ ನಡೆಸಿದ ನಂತರ, ಹೆಂಡತಿಯ ದೇಹದಿಂದ ರಕ್ತ ಹರಿಯುವ ದೃಶ್ಯವನ್ನು ನೋಡಿ ಆತಂಕಗೊಂಡ ಗೋಪಾಲಕೃಷ್ಣ, ಅದೇ ದಿನ (15/07/2025) ಮಧ್ಯಾಹ್ನ ಸುಮಾರು 2:20ರಿಂದ 2:40ರೊಳಗೆ ತಮ್ಮ ಮನೆಯ ತೋಟದಲ್ಲಿ ಮರಕ್ಕೆ ಹಗ್ಗ ಕಟ್ಟಿಕೊಂಡು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 27/2025ರಂತೆ BNSS ಕಲಂ 194 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.