
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಕುಕನೀರ್ ವೆಂಕಟಾಪುರ ಹೊಳೆಯ ದಂಡೆ ಬಳಿ ಗರ್ಭಿಣಿ ಗೋವನ್ನು ಹತ್ಯೆಗೈದು ಮಾಂಸ ಸಾಗಾಟ ಮಾಡಿದ ವಿಕೃತ ಘಟನೆ ಬೆಳಕಿಗೆ ಬಂದಿದೆ.
ಮಾಂಸಕ್ಕಾಗಿ ದನವನ್ನು ಹತ್ಯೆ ಮಾಡಿದ ನಂತರ, ಅದರ ಗರ್ಭದಲ್ಲಿದ್ದ ಕರುವಿನ ಭ್ರೂಣ ಹಾಗೂ ಅಂಗಾಂಗಗಳನ್ನು ಗೋಣಿ ಚೀಲದಲ್ಲಿ ಸುತ್ತಿ ತ್ಯಜಿಸಿದ್ದರು. ಈ ಚೀಲವನ್ನು ಬೀದಿ ನಾಯಿಯೊಂದು ಎಳೆದು ತಂದುತೆಗೆಯುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರಿಗೆ ಶಂಕೆ ಉಂಟಾಗಿ, ಪ್ರಕರಣ ಬಹಿರಂಗವಾಯಿತು.
ಘಟನೆ ಸ್ಥಳಕ್ಕೆ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ದಿನಗಳಲ್ಲಿ ಹೊನ್ನಾವರದಲ್ಲಿ ಈ ರೀತಿಯೇ ಇತರ ಪ್ರಕರಣವೊಂದು ನಡೆದಿದ್ದು, ಆಗ ಪೊಲೀಸರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಕಾಲಿಗೆ ಗುಂಡುಹಾರಿಸಿ ಬಂಧಿಸಿದ್ದರು.
ಆ ಘಟನೆ ಇನ್ನೂ ಮಾಸುವ ಮುನ್ನವೇ, ಭಟ್ಕಳದಲ್ಲಿ ಮತ್ತೊಂದು ಶೋಕಾಂತ ಘಟನೆ ಬೆಳಕಿಗೆ ಬಂದಿದ್ದು, ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಂತೆ ತನಿಖೆ ಮುಂದುವರೆಸಿದ್ದಾರೆ.