
ಕಾಪು: ಅಂದರ್-ಬಾಹರ್ ಜುಗಾರಿ ದಾಳಿ – ಐದು ಮಂದಿ ಪೊಲೀಸ್ ವಶಕ್ಕೆ
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಾಂಗಾಳದಲ್ಲಿ ಜುಗಾರಿ ದಾಳಿ ನಡೆದಿದ್ದು, ಮನೆ ಬದಿಯಲ್ಲಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ಐದು ಮಂದಿಯನ್ನು ಕಾಪು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ದಿನಾಂಕ 27-07-2025 ರಂದು ಸಂಜೆ 7 ಗಂಟೆಯ ಸುಮಾರಿಗೆ ಕಾಪು ಪಿಎಸ್‌ಐ ಮಹೇಶ್ ಟಿ.ಎಂ ಅವರಿಗೆ ಮೇಲ್ಪಂಗಾಳದ ರಾಜೇಶ್ ಶೆಟ್ಟಿ ಅವರ ಮನೆಯ ಬಳಿಯಲ್ಲಿ ಕೆಲವರು ಜುಗಾರಿ ಆಟದಲ್ಲಿ ತೊಡಗಿದ್ದಾರೆ ಎಂಬ ಖಚಿತ ಮಾಹಿತಿ ದೊರೆಯಿತು. ಸದ್ಯ ಶಂಕಿತ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಅಂದರ್-ಬಾಹರ್ ಆಟವಾಡುತ್ತಿದ್ದ 7–8 ಮಂದಿಯಲ್ಲಿ ಐದು ಜನರನ್ನು ವಶಕ್ಕೆ ಪಡೆದಿದ್ದಾರೆ.
ಪಕಡಲಾದವರು:
- ಸುಲೇಮಾನ (57), ಬಡಾಗ್ರಾಮ, ಉಚ್ಚಿಲ
- ಚಂದ್ರಶೇಖರ್ (55), ಅತ್ರಾಡಿ, ಹಿರಿಯಡ್ಕ
- ಮಿಥುನ್ (41), ಬಡಾಗ್ರಾಮ, ಉಚ್ಚಿಲ
- ಅಮಾನುಲ್ಲಾ (50), ಮಲ್ಲಾರು
- ಸುರೇಶ್ (55), ಉಳಿಯಾರಗೊಳಿ
ಪೊಲೀಸರು ವಶಪಡಿಸಿಕೊಂಡ ವಸ್ತುಗಳು:
- 3 ಸೆಟ್ ವಿವಿಧ ಬಣ್ಣದ ಇಸ್ಪೀಟ್ ಎಲೆಗಳು
- ₹7,500 ನಗದು
- 2 ಬೆಡ್ ಶೀಟ್‌ಗಳು
- 1 VIVO ಕಂಪನಿಯ ಮೊಬೈಲ್ ಫೋನ್
ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 96/2025ರಂತೆ, ಕರ್ನಾಟಕ ಪೋಲೀಸ್ ಕಾಯ್ದೆ ಕಲಂ 87ನಡಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.