
ಕಾಪು: ಕಟಪಾಡಿಯ ನಿವಾಸಿ ಹಾಗೂ ನಿವೃತ್ತ ಯೋಧರಾದ ಶೇಕ್ ಇಬ್ರಾಹಿಂ (85) ಅವರು ಅಲ್ಪಕಾಲದ ಅಸೌಖ್ಯದಿಂದ ಜುಲೈ 11 ರಂದು (ಶುಕ್ರವಾರ) ತಮ್ಮ ಸ್ವಗೃಹದಲ್ಲಿ ನಿಧನರಾದರು.
ಶೇಕ್ ಇಬ್ರಾಹಿಂ ಅವರು ಹಲವು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಯೋಧರಾಗಿ ದೇಶಸೇವೆ ಸಲ್ಲಿಸಿದ್ದರು. ಯೋಧ ವೃತ್ತಿಯಿಂದ ನಿವೃತ್ತಿಯಾದ ಬಳಿಕ, ಅವರು ಬ್ಯಾಂಕ್ ಉದ್ಯೋಗಿಯಾಗಿ ತಮ್ಮ ಸೇವೆಯನ್ನು ಮುಂದುವರೆಸಿದ್ದರು. ತನ್ನ ಸೇವಾಭಾವನೆಯು ಕೇವಲ ವೃತ್ತಿಗೆ ಮಾತ್ರ ಸೀಮಿತವಾಗದೆ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳತ್ತಲೂ ವಿಸ್ತರಿತ್ತು.
ಕಟಪಾಡಿ ಜುಮಾ ಮಸೀದಿಯ ಅಧ್ಯಕ್ಷರಾಗಿ ಮತ್ತು ಕಾರ್ಯದರ್ಶಿಯಾಗಿ ಅವರು ದೀರ್ಘಕಾಲ ಸೇವೆ ಸಲ್ಲಿಸಿದರು. ಈ ಮೂಲಕ ಸ್ಥಳೀಯ ಸಮುದಾಯದಲ್ಲಿ ಸಾಂಸ್ಥಿಕವಾಗಿ ಮತ್ತು ಆತ್ಮೀಯವಾಗಿ ಜನರೊಂದಿಗೆ ಅವರ ನಂಟು ಬೆಸೆದು, ಎಲ್ಲರಿಗೂ ಗೌರವನೀಯ ವ್ಯಕ್ತಿಯಾಗಿ ಪರಿಗಣಿಸಲ್ಪಟ್ಟಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ನಿಧನದಿಂದ ಕುಟುಂಬ ಸದಸ್ಯರಷ್ಟೇ ಅಲ್ಲದೆ ಸಮುದಾಯದ ಜನರೂ ಕಳೆವನ್ನೆ ಅನುಭವಿಸುತ್ತಿದ್ದಾರೆ. ಕುಟುಂಬದ ಸಂತಾಪದಲ್ಲಿ ನಾವು ಸಹಭಾಗಿಯಾಗುತ್ತೇವೆ.