April 30, 2025
karnataka

ಮಾರ್ಚ್ 21, 2025 ರಂದು ನಡೆದ ಕರ್ನಾಟಕ ವಿಧಾನಸಭೆಯ ಕಲಾಪದಲ್ಲಿ, ಬಿಜೆಪಿ ಶಾಸಕರು ಹನಿಟ್ರ್ಯಾಪ್ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ, ಕೆಲವು ಶಾಸಕರು ಸ್ಪೀಕರ್ ಪೀಠದ ಬಳಿ ತೆರಳಿ, ಕಾಗದ ಪತ್ರಗಳನ್ನು ಹರಿದು, ಪೀಠಕ್ಕೆ ಅಗೌರವ ತೋರಿಸಿದರು. ಈ ವರ್ತನೆಯ ಹಿನ್ನೆಲೆಯಲ್ಲಿ, ಸ್ಪೀಕರ್ ಯುಟಿ ಖಾದರ್ ಅವರು 18 ಬಿಜೆಪಿ ಶಾಸಕರನ್ನು 6 ತಿಂಗಳುಗಳ ಕಾಲ ವಿಧಾನಸಭೆಯ ಎಲ್ಲಾ ಕಲಾಪಗಳಿಂದ ಅಮಾನತು ಮಾಡಿದರು.

ಅಮಾನತುಗೊಂಡ ಶಾಸಕರ ಪಟ್ಟಿ ಹೀಗಿದೆ:

  • ದೊಡ್ಡಣ್ಣ ಗೌಡ ಪಾಟೀಲ್
  • ಸಿ ಕೆ ರಾಮಮೂರ್ತಿ
  • ಅಶ್ವತ್ಥ ನಾರಾಯಣ
  • ಎಸ್ ಆರ್ ವಿಶ್ವನಾಥ್
  • ಬೈರತಿ ಬಸವರಾಜ
  • ಎಂ ಆರ್ ಪಾಟೀಲ್
  • ಚನ್ನಬಸಪ್ಪ
  • ಬಿ ಸುರೇಶ್ ಗೌಡ
  • ಉಮನಾಥ್ ಕೋಟ್ಯಾನ್
  • ಶರಣು ಸಲಗಾರ್
  • ಶೈಲೇಂದ್ರ ಬೆಲ್ದಾಲ್
  • ಯಶಪಾಲ್ ಸುವರ್ಣ
  • ಹರೀಶ್ ಬಿಪಿ
  • ಭರತ್ ಶೆಟ್ಟಿ
  • ಮುನಿರತ್ನ
  • ಬಸವರಾಜ ಮತ್ತಿಮೋಡ್
  • ಧೀರಜ್ ಮುನಿರಾಜು
  • ಡಾ. ಚಂದ್ರು ಲಮಾಣಿ

ಈ ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ, ಈ ವಿಡಿಯೋವನ್ನು ನೋಡಿ:

ಕೃಪೆ: ವಿಜಯ ಕರ್ನಾಟಕ

error: Content is protected !!