
ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಪೀಡನೆ ಇನ್ನೂ ಕಡಿಮೆಯಾಗಿಲ್ಲದಿರುವಾಗಲೇ ಮತ್ತೊಂದು ಹೊರೆ ಬಿದ್ದಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಇಂದು (ಮಾರ್ಚ್ 20) ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 36 ಪೈಸೆಯಷ್ಟು ಹೆಚ್ಚಿಸುವ ಆದೇಶ ಹೊರಡಿಸಿದೆ.
ವಿದ್ಯುತ್ ಪ್ರಸರಣ ಮತ್ತು ಎಸ್ಕಾಂ ಸಿಬ್ಬಂದಿಯ ಪಿಂಚಣಿ ಹಾಗೂ ಗ್ರ್ಯಾಚುಟಿ ಮೊತ್ತವನ್ನು ಗ್ರಾಹಕರಿಂದ ವಸೂಲಿ ಮಾಡಲು ಮುಂದಾಗಿರುವ ಕೆಇಆರ್‌ಸಿ, ಏಪ್ರಿಲ್ 1ರಿಂದಲೇ ಈ ಹೊಸ ದರವನ್ನು ಜಾರಿಗೆ ತರುತ್ತಿದೆ.
ಈಗಾಗಲೇ ಬಸ್ ಟಿಕೆಟ್ ದರ, ಮೆಟ್ರೋ ಪ್ರಯಾಣ ದರ ಹಾಗೂ ದಿನಸಿ ಸಾಮಗ್ರಿಗಳ ಬೆಲೆ ಏರಿಕೆಯಿಂದ ಕಂಗೆಟ್ಟ ಜನರಿಗೆ, ವಿದ್ಯುತ್ ದರ ಹೆಚ್ಚಳ ಮತ್ತಷ್ಟು ಆರ್ಥಿಕ ಹೊರೆ ಆಗಲಿದೆ.