
ಕದ್ರಿ: ಕಲಬುರಗಿಯಿಂದ ಆಗಮಿಸಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ವಿಕಾಸ್ (18) ಕಳೆದ ಆರು ತಿಂಗಳಿನಿಂದ ಕದ್ರಿಯ ಬಾಯ್ಸ್ ಪಿಜಿಯಲ್ಲಿ ವಾಸ ಮಾಡುತ್ತಿದ್ದನು. ಅಲ್ಲಿನ ಅವ್ಯವಸ್ಥೆಗಳಿಂದ ಬೇಸತ್ತ ವಿಕಾಸ್, ಬೇರೆ ಕೋಣೆಗೆ ಸ್ಥಳಾಂತರಗೊಂಡಿದ್ದನು.
ಪಿಜಿಯ ಆಹಾರದಲ್ಲಿ ಹುಳುಗಳು ಕಂಡುಬಂದದ್ದು, ಶೌಚಾಲಯದ ಅಸ್ವಚ್ಛತೆ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಅಸಮಾಧಾನಗೊಂಡು, ಗೂಗಲ್‌ನಲ್ಲಿ ಪಿಜಿಗೆ ಸಿಂಗಲ್-ಸ್ಟಾರ್ ರೇಟಿಂಗ್ ನೀಡಿ ತನ್ನ ಅನಾನುಕೂಲ ವ್ಯಕ್ತಪಡಿಸಿದ್ದನು. ಇದರಿಂದ ಆಕ್ರೋಶಗೊಂಡ ಪಿಜಿ ಮಾಲಕ ಸಂತೋಷ್ ಹಾಗೂ ಅವನ ಸಹಚರರು, ಮಾರ್ಚ್ 17ರ ರಾತ್ರಿ 10:30ಕ್ಕೆ ವಿಕಾಸ್‌ನನ್ನು ತಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ದೂರಿಸಲಾಗಿದೆ.
ಆರೋಪಿಗಳು ರೇಟಿಂಗ್ ತೆಗೆದುಹಾಕುವಂತೆ ಒತ್ತಡ ಹಾಕಿದಾಗ, ವಿಕಾಸ್ ಅದನ್ನು ನಿರಾಕರಿಸಿದ್ದ, ಪರಿಣಾಮ ಹಲ್ಲೆಗೆ ಒಳಗಾಗಿದ್ದಾನೆ ಎಂದು ವರದಿಯಾಗಿದೆ.
ಈ ಕುರಿತು ವಿಕಾಸ್ ಕದ್ರಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.