August 6, 2025
Screenshot_20250702_0013042

ಕಾಪು: ಬಾರ್ ಪಕ್ಕದ ಶೆಡ್‌ನಲ್ಲಿ ಅಕ್ರಮ ಮದ್ಯ ಮಾರಾಟ – ಕಾಪು ಪೊಲೀಸರು ದಾಳಿ

ಉಡುಪಿ ಜಿಲ್ಲೆಯ ಕಾಪು ಸಮೀಪದ ಕಟಪಾಡಿ ಪೇಟೆಯ ಬಾರ್ ಪಕ್ಕದ ಶೆಡ್‌ನಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಾಪು ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ಘಟನೆಯ ವಿವರ:

2025ರ ಜುಲೈ 1 ರಂದು ಬೆಳಿಗ್ಗೆ 10:50ಕ್ಕೆ ಕಾಪು ಪೊಲೀಸ್ ಠಾಣೆಯ ಉಪನಿರೀಕ್ಷಕ ತೇಜಸ್ವಿ ಟಿ ಐ ರವರು ಪಾಂಗಾಳ ಮತ್ತು ಕಟಪಾಡಿ ಪ್ರದೇಶಗಳಲ್ಲಿ ಗಸ್ತುಲ್ಲಿದ್ದು, ಬೆಳಿಗ್ಗೆ 10:30ರ ವೇಳೆ ಬಾತ್ಮೀದಾರರಿಂದ ಅಕ್ರಮ ಮದ್ಯ ಮಾರಾಟದ ಮಾಹಿತಿ ಪಡೆದರು.

ಅವರ ಮಾಹಿತಿ ಮೇರೆಗೆ ಕೂಡಲೇ ಕಟಪಾಡಿ ಹೊರಠಾಣೆಯ ಎಎಸ್‌ಐ ದಯಾನಂದ ಅವರನ್ನು ಸಂಪರ್ಕಿಸಿ, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಕಟಪಾಡಿ ಪೇಟೆಯ ವೈನ್ ಗೇಟ್ ಬಾರ್ ಪಕ್ಕದ ತೆರೆದ ಶೆಡ್‌ನಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿರುವುದು ದೃಢಪಟ್ಟಿತು.

ಘಟನಾ ಸ್ಥಳದಲ್ಲಿ ವರದಿ ತಯಾರಿಸಿ, ಸಂಬಂಧಿತ ಸಿಬ್ಬಂದಿಯ ಮೂಲಕ ಠಾಣೆಗೆ ಕಳುಹಿಸಲಾಯಿತು. ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 88/2025 ರಂತೆ, ಕರ್ನಾಟಕ ಎಕ್ಸೈಸ್ ಕಾಯ್ದೆಯ ಸೆಕ್ಷನ್ 32, 34 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

error: Content is protected !!