March 17, 2025
2025-03-17 at 12.34.07 PM

ಕಿಶೋರ್ ಕರ್ಕೇರ, ಮಲ್ಪೆ ಇವರು ಮಲ್ಪೆಯಿಂದ ಮೀನುಗಾರಿಕೆ ಸಲುವಾಗಿ ಶ್ರೀ ಮಹಾಕಾಳಿ ಬೋಟಿನಲ್ಲಿ ಅರಬ್ಬಿ ಸಮುದ್ರಕ್ಕೆ ತೆರಳುತ್ತಿರುವ ಸಂಧರ್ಭದಲ್ಲಿ ಸಂಜೆ ಸೈಂಟ್ ಮೇರಿಸ್ ದ್ವೀಪದಿಂದ ಪಶ್ಚಿಮಕ್ಕೆ ಸುಮಾರು 200 ಮೀಟರ್ ದೂರ ತಲುಪುವಾಗ ಸಮುದ್ರದಲ್ಲಿ ಒಂದು ವಿದೇಶಿ ಬೋಟು ಸಂಶಯಾಸ್ಪದವಾಗಿ ಸಂಚರಿಸುತ್ತಿರುವುದನ್ನು ಗಮನಿಸಿ ಕೂಡಲೇ ಕರಾವಳಿ ಕಾವಲು ಪೊಲೀಸ್ ಕಚೇರಿಗೆ ಮಾಹಿತಿ ನೀಡಿರುತ್ತಾರೆ. ಇದು ದೇಶದ ಭದ್ರತೆ ಬಗ್ಗೆ ಅವರ ಕಾಳಜಿಯ ಪ್ರತೀಕವಾಗಿದ್ದು ಅವರ ಈ ಸಮಯ ಪ್ರಜ್ಞೆಯ ನಡವಳಿಕೆಯಿಂದಾಗಿ ಓಮನ್ ದೇಶದ ಒಂದು ಮೀನುಗಾರಿಕಾ ಬೋಟು ಹಾಗೂ ಅದರಲ್ಲಿದ್ದ 3 ಮಂದಿ ವ್ಯಕ್ತಿಗಳು ನಮ್ಮ ದೇಶದ ಜಲಪರಿಧಿಯೊಳಗೆ ಅನಧಿಕೃತವಾಗಿ ಪ್ರವೇಶಿಸಿರುವುದನ್ನು ಪತ್ತೆ ಮಾಡಲು ಸಹಕಾರಿಯಾಗಿರುತ್ತದೆ. ಕರಾವಳಿ ಕಾವಲು ಪೊಲೀಸ್ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ಬಗ್ಗೆ ಶ್ರೀ ಕಿಶೋರ್ ಕರ್ಕೇರ ಇವರ ಶ್ಲಾಘನೀಯ ಕಾರ್ಯವನ್ನು ಗುರುತಿಸಿ ಕರಾವಳಿ ಕಾವಲು ಪೊಲೀಸ್ ಕೇಂದ್ರ ಕಚೇರಿಯಲ್ಲಿ ನಡೆದ ಮೀನುಗಾರಿಕಾ ಇಲಾಖೆಯೊಂದಿಗಿನ ಸಮನ್ವಯ ಸಭೆಯಲ್ಲಿ ಸನ್ಮಾನಿಸಲಾಯಿತು.