
ಮಧೂರು ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಮಂಗಳೂರು-ಮಧೂರು ಮಾರ್ಗದಲ್ಲಿ ವಿಶೇಷ ಬಸ್ ಸೇವೆಯನ್ನು ಆರಂಭಿಸಲಾಗಿದೆ.
ಈ ವಿಶೇಷ ಬಸ್ ಸೇವೆ ಏಪ್ರಿಲ್ 4ರಿಂದ ಲಭ್ಯವಿದ್ದು, ಮಂಗಳೂರಿನ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಬೆಳಿಗ್ಗೆ 10.00 ಮತ್ತು 10.20ಕ್ಕೆ ಮಧೂರಿಗೆ ಪ್ರಯಾಣಿಸಲು ಹೊರಡಲಿದೆ.
ಮಧೂರಿಯಿಂದ ಮಂಗಳೂರಿಗೆ ಮಧ್ಯಾಹ್ನ 1.30 ಮತ್ತು 1.45ಕ್ಕೆ ಬಸ್ ಹೊರಡಿಸಲಾಗುವುದು ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.