August 3, 2025
IMG-20250418-WA0013

ಕೇಂದ್ರ ಸರ್ಕಾರವು ಒಂದು ಐತಿಹಾಸಿಕ ತೀರ್ಮಾನ ಕೈಗೊಂಡಿದ್ದು, ದೇಶದ ಎಲ್ಲ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಪ್ರತಿಮಾಸದ ಎರಡನೇ ಹಾಗೂ ನಾಲ್ಕನೇ ಶನಿವಾರಗಳ ರಜೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ. ಈ ಹೊಸ ವ್ಯವಸ್ಥೆ ಜೂನ್ 14, 2025ರ ಎರಡನೇ ಶನಿವಾರದಿಂದ ಪ್ರಯೋಗಾತ್ಮಕವಾಗಿ ಪ್ರಾರಂಭವಾಗಿದ್ದು, ಜುಲೈ 14, 2025ರಿಂದ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ.

ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನ ಆದೇಶದ ಆಧಾರದ ಮೇಲೆ ರಾಷ್ಟ್ರಪತಿಯವರು ಅಂಗೀಕರಿಸಿದ್ದು, ಸಂವಿಧಾನದ ವಿಧಿ 145ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಆಧಾರವನ್ನಾಗಿ ಮಾಡಿಕೊಂಡು 2013ರ ಆದೇಶದ ಕ್ಲಾಸ್ 2ರ ನಿಯಮಗಳಲ್ಲಿ ತಿದ್ದುಪಡಿ ಮಾಡಲಾಗಿದೆ.

ಈ ತಿದ್ದುಪಡಿಯಂತೆ, ಕಳೆದ ಹಲವು ದಶಕಗಳಿಂದ ಸರ್ಕಾರಿ ನೌಕರರಿಗೆ ಲಭ್ಯವಿದ್ದ ಎರಡನೇ ಹಾಗೂ ನಾಲ್ಕನೇ ಶನಿವಾರದ ರಜೆಗಳು ಇನ್ನು ಮುಂದೆ ಇರುವುದಿಲ್ಲ. ಸುಪ್ರೀಂ ಕೋರ್ಟ್ ಈ ಕ್ರಮವು ಕೇಂದ್ರ ಸರ್ಕಾರದ ಆಡಳಿತಾತ್ಮಕ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ರೂಪಿಸುವ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಕಾರಿ ಎನ್ನುವುದನ್ನು ಸ್ಪಷ್ಟಪಡಿಸಿದೆ. ಈ ಸಂಬಂಧಿತ ಆದೇಶವನ್ನು ಈಗಾಗಲೇ ಕೇಂದ್ರ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.

ಸಂವಿಧಾನದ ವಿಧಿ 145ರ ಅಡಿಯಲ್ಲಿ, ಸುಪ್ರೀಂ ಕೋರ್ಟ್ ತನ್ನ ಕಾರ್ಯಪದ್ಧತಿಯುಗಳಲ್ಲಿ ಅಗತ್ಯವಿರುವ ನಿಯಮಗಳನ್ನು ರೂಪಿಸಲು ಅಧಿಕಾರ ಹೊಂದಿದ್ದು, ಈ ಅಡಿಯಲ್ಲಿ 2013ರ ನಿಯಮದ ಕಲಮ್ 2ರ ಉಪನಿಯಮ 1, 2 ಮತ್ತು 3ರಲ್ಲಿ ತಿದ್ದುಪಡಿ ತರಲಾಗಿದೆ. ಈ ತಿದ್ದುಪಡಿಗಳಿಗೆ ರಾಷ್ಟ್ರಪತಿಯವರ ಮಾನ್ಯತೆ ಸಿಕ್ಕಿದ್ದು, ಈ ಆದೇಶ ಕಾನೂನುಬದ್ಧವಾಗಿ ಜಾರಿಯಲ್ಲಿದೆ. ಇದರ ಮುಖ್ಯ ಉದ್ದೇಶವೆಂದರೆ ಸರ್ಕಾರಿ ಕಚೇರಿಗಳ ಕಾರ್ಯದಿನಗಳನ್ನು ಹೆಚ್ಚಿಸುವ ಮೂಲಕ ಆಡಳಿತಾತ್ಮಕ ವಿಳಂಬವನ್ನು ಕಡಿಮೆ ಮಾಡುವುದು.

error: Content is protected !!