August 5, 2025
thalapady2-300x200-1

ಉಳ್ಳಾಲ: ವಿದ್ಯಾರ್ಥಿನಿ ಶ್ರೇಯಾ ಆತ್ಮಹತ್ಯೆ – ಓದಿನ ಒತ್ತಡ, ಅವಮಾನ ಕಾರಣ?

ಉಳ್ಳಾಲದ ತಲಪಾಡಿ ಕಿನ್ನದಲ್ಲಿ ದ್ವಿತೀಯ ವರ್ಷದ ಬಿಎ ಸೈಕಾಲಜಿ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಶ್ರೇಯಾ (19) ಎಂದು ಗುರುತಿಸಲಾಗಿದೆ.

ಶ್ರೇಯಾ ಓದಿನ ಒತ್ತಡ ಮತ್ತು ತಲೆನೋವಿನಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದ್ದು, ಈ ಕುರಿತು ಅವರು ಬರೆದ ಡೆತ್ ನೋಟ್‌ಗಳು ಪತ್ತೆಯಾಗಿವೆ. ಡೆತ್ ನೋಟ್‌ನಲ್ಲಿ ತಾನೊಬ್ಬಳು ಕಪ್ಪು ಎಂದು ನಿರಂತರ ಅವಮಾನಕ್ಕೆ ಗುರಿಯಾಗುತ್ತಿದ್ದ ಬಗ್ಗೆ ಶ್ರೇಯಾ ಉಲ್ಲೇಖಿಸಿದ್ದಾರೆ.

ಮೇ ತಿಂಗಳಲ್ಲಿ ಶ್ರೇಯಾ ಬರೆದ ಮತ್ತೊಂದು ಡೆತ್ ನೋಟ್‌ನಲ್ಲಿ, “ನನ್ನನ್ನು ಯಾರೂ ಪ್ರೀತಿಸುವುದಿಲ್ಲ, ನಾನು ಬದುಕಬಾರದು, ನನ್ನಿಂದ ಮನೆಯವರಿಗೆ ಕಷ್ಟವಾಗುತ್ತದೆ” ಎಂಬ ಭಾವನೆಗಳನ್ನು ವ್ಯಕ್ತಪಡಿಸಿದ್ದಾಳೆ.

ಇನ್ನು, ಮನೆಯ ಕಪಾಟಿನ ಮೇಲೆ ಶ್ರೇಯಾ “I don’t like this generation, so I decided to suicide” ಎಂದು ಬರೆಯುವ ಮೂಲಕ ತನ್ನ ನಿರ್ಧಾರವನ್ನು ತೋರುವಂತೆ ಮಾಡಿದ್ದಾರೆ.

ಪ್ರಾಥಮಿಕ ಮಾಹಿತಿಯಂತೆ ಶ್ರೇಯಾ ತನ್ನ ಪ್ರಥಮ ಸೆಮಿಸ್ಟರ್‌ನಲ್ಲಿ ಎರಡು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದಳು. ಸಾಮಾನ್ಯವಾಗಿ ಮೌನಿಯಾಗಿದ್ದ ಶ್ರೇಯಾ ಬಹಳಷ್ಟು ಒಂಟಿತನದಲ್ಲಿ ಇರುವವಳಾಗಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಪೋಸ್ಟ್‌ಮಾರ್ಟಂ ವರದಿಯ ಪ್ರಕಾರ, ಶ್ರೇಯಾ ಗರ್ಭಿಣಿಯಾಗಿದ್ದಾಳೆ ಎಂದು ವೈದ್ಯಕೀಯ ಮಾಹಿತಿ ಲಭ್ಯವಾಗಿದೆ. ಘಟನೆ ಸಂಬಂಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!