August 7, 2025
2025-03-20 at 10.42.58 AM

ಉದ್ಯಾವರ: ಸಮಾಜ ಸಂಘಟಕ, ನಿವೃತ್ತ ಪ್ರೊ. ವಿ.ಕೆ. ಉದ್ಯಾವರ (66) ಹೃದಯಾಘಾತದಿಂದ ಮಾ. 20 ರ ಗುರುವಾರ ನಿಧನ ಹೊಂದಿದರು.

ಉಡುಪಿ ಬೋರ್ಡ್ ಹೈಸ್ಕೂಲ್, ಗ್ರೀನ್ ಪಾರ್ಕ್ ಕಾಲೇಜ್, ಕಾಪು ವಿದ್ಯಾನಿಕೇತನ, ತ್ರಿಷಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಆಡಳಿತಾಧಿಕಾರಿಯಾಗಿ, ಪ್ರಾಂಶುಪಾಲರಾಗಿ ಸೇವೆಯನ್ನು ಸಲ್ಲಿಸಿದ್ದರು.

ಮೂಲತಃ ಉದ್ಯಾವರ ಅಂಕುದ್ರು ನಿವಾಸಿ, ಪ್ರಸ್ತುತ ಮಣಿಪಾಲದಲ್ಲಿ ವಾಸ್ತವ್ಯ ಹೊಂದಿದ್ದರು.

ಉದ್ಯಾವರ ಯುವಕ ಮಂಡಲ, ಉದ್ಯಾವರ ಸಾರ್ವಜನಿಕ ಗಣೇಶೋತ್ಸವ ಸಹಿತ ಹತ್ತು ಹಲವು ಸಂಘಟನೆಗಳನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮಾಜಿ ಶಾಸಕ ಯು.ಆರ್. ಸಭಾಪತಿ ಅವರ ಆಪ್ತರಾಗಿದ್ದು, ಉತ್ತಮ ಮಾರ್ಗದರ್ಶಕರಾಗಿದ್ದು, ನಾಟಕ ರಂಗ ನಿರ್ದೇಶಕರಾಗಿ, ಕಲಾವಿದರಾಗಿ, ಸರಳತೆ, ಸಜ್ಜನಿಕೆಯಿಂದ ಜನಾನುರಾಗಿಯಾಗಿದ್ದರು. ಕಾಲೇಜು ವಿದ್ಯಾರ್ಥಿಗಳಿಗೆ ರಾಷ್ಟ್ರಭಕ್ತಿ, ಕೃಷಿ ಪ್ರೇಮ, ಸಹಿತ ಹಲವು ಸಮಾಜಮುಖಿ ಕಾರ್ಯಕ್ರಮವನ್ನು ನಡೆಸುವ ಮೂಲಕ ಜನಮನ್ನಣೆ ಗಳಿಸಿದ್ದರು.

ಸಾಮಾಜಿಕ ಕಾರ್ಯಕರ್ತ, ಉತ್ತಮ ವಾಗಿ, ಸಮಾಜಮುಖಿ ಚಿಂತಕರಾಗಿದ್ದ ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ, ಅಪಾರ ಸಂಖ್ಯೆಯ ವಿದ್ಯಾರ್ಥಿ ಬಳಗ, ಬಂಧು- ಮಿತ್ರರನ್ನು ಅಗಲಿದ್ದಾರೆ.

error: Content is protected !!