August 6, 2025
2025-05-10 at 4.45.53 PM

ಉದ್ಯಾವರ: ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಸ್ಥಾನ ಕಂಪನಬೆಟ್ಟು, ಉದ್ಯಾವರ ಇದರ ಪುನರ್ ನಂಬುಗೆ ಕಲಶಾಭಿಷೇಕ, ಅಶ್ವತ್ಥ ವೃಕೋಪನಯನ ಹಾಗೂ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ನೇಮೋತ್ಸವದ ಕರೆಯೋಲೆ

ಸ್ವಸ್ತಿ|ಶ್ರೀ ವಿಶ್ವಾವಸು ನಾಮ ಸಂವತ್ಸರದ ಮೇಷ ಮಾಸ, ವೈಶಾಖ ಬಹುಳ ಪ್ರತಿಪದೆಯಂದು (13-05-2025 ಮಂಗಳವಾರ) ಮತ್ತು 14-05-2025 (ಬುಧವಾರ) ರಂದು ಶ್ರೀ ಕಂಜಗಾರ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ನೂತನ ಸ್ಥಾನ ಪ್ರವೇಶ, ಪುನರ್ ನಂಬಿಕೆ, ಕಲಶಾಭಿಷೇಕ, ಅಶ್ವತ್ಥ ವೃಕ್ಷೋಪನಯನ ವಿವಾಹ ಮತ್ತು ಸಾರ್ವಜನಿಕ ಅನ್ನಸಂತರ್ಪಣೆಯು ವೈಭೋಗದಿಂದ ನಡೆಯಲಿದೆ.

ಅದಕ್ಕೆ ಮುಂದಾಗಿ, ಶ್ರೀ ಕ್ರೋಧಿ ನಾಮ ಸಂವತ್ಸರದ ಮೀನ ಮಾಸ, ಚೈತ್ರ ಶುಕ್ಲ ೧೩ ಯು (15-05-2025 ಗುರುವಾರ) ಮತ್ತು 16-05-2025 (ಶುಕ್ರವಾರ) ರಂದು ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ನೇಮೋತ್ಸವ ಮತ್ತು ಅನ್ನಸಂತರ್ಪಣೆಯು ಧಾರ್ಮಿಕ ಶ್ರದ್ಧೆಯೊಂದಿಗೆ ಆಚರಿಸಲಾಗುತ್ತದೆ.

ಕಾರ್ಯಕ್ರಮ ವಿವರಗಳು

12-05-2025 (ಸೋಮವಾರ):

  • ಹಸಿರು ಹೊರೆಕಾಣಿಕೆ ಸಮರ್ಪಣೆ ಉತ್ಸವ ಮೆರವಣಿಗೆ: ಉದ್ಯಾವರ ಶ್ರೀ ವೀರಭದ್ರ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಆರಂಭವಾಗಿ ಶ್ರೀ ಗಣಪತಿ ದೇವಸ್ಥಾನ, ಸಂಪಿಗೆನಗರ ಮಾರ್ಗವಾಗಿ ಕಂಪನಬೆಟ್ಟು ಬಬ್ಬುಸ್ವಾಮಿ ದೈವಸ್ಥಾನಕ್ಕೆ

13-05-2025 (ಮಂಗಳವಾರ):

  • ರಾತ್ರಿ 8.00: ವಾಸ್ತು ಹೋಮ, ವಾಸ್ತು ಬಲಿ, ಸ್ಥಳ ಶುದ್ಧೀಕರಣ

14-05-2025 (ಬುಧವಾರ):

  • ಬೆಳಿಗ್ಗೆ 8.00: ಶುದ್ಧ ಹೋಮ, ನವ ಕಲಶ ಹೋಮ
  • ಬೆಳಿಗ್ಗೆ 8.30: ಅಶ್ವತ್ಥ ವೃಕ್ಷೋಪನಯನ ಮತ್ತು ವಿವಾಹ
  • ಬೆಳಿಗ್ಗೆ 10.00: ದೈವಗಳ ನೂತನ ಸ್ಥಾನ ಪ್ರವೇಶ, ಪುನರ್ ನಂಬುಗೆ, ಕಲಶಾಭಿಷೇಕ (ಶ್ರೀ ರಮೇಶ್ ಪಾತ್ರಿ, ಎರ್ಮಾಳ್ ತಂಕ, ಅಳಿವೆಕೋಡಿ ನೇತೃತ್ವದಲ್ಲಿ), ದೈವ ದರ್ಶನ ಹಾಗೂ ಪ್ರಸಾದ ವಿತರಣೆ
  • ಮಧ್ಯಾಹ್ನ 12.00: ಪಲ್ಲಪೂಜೆ
  • ಮಧ್ಯಾಹ್ನ 12.30: ಸಾರ್ವಜನಿಕ ಅನ್ನಸಂತರ್ಪಣೆ
  • ಮಧ್ಯಾಹ್ನ 12.30ರಿಂದ: ಭಕ್ತಿ ರಸಮಂಜರಿ ಕಾರ್ಯಕ್ರಮ – ಸ್ವಸ್ತಿ ಮೆಲೋಡಿಸ್ (ಕುಮಾರ್ ಉದ್ಯಾವರ ಮತ್ತು ತಂಡ)

15-05-2025 (ಗುರುವಾರ):

  • ಬೆಳಿಗ್ಗೆ 7.30: ಗಜಕಂಬ ಪ್ರತಿಷ್ಠೆ (ಕೋಲ ಚಪ್ಪರ)
  • ಮಧ್ಯಾಹ್ನ 11.30: ಚಪ್ಪರ ಆರೋಹಣ
  • ಮಧ್ಯಾಹ್ನ 12.30: ಅನ್ನಸಂತರ್ಪಣೆ
  • ಸಂಜೆ 5.30: ಭಂಡಾರವು ದೈವ ದರ್ಶನದೊಂದಿಗೆ ನೇಮೋತ್ಸವ ಅಂಗಣಕ್ಕೆ ಹೊರಟು ಹೋಗುವುದು
  • ರಾತ್ರಿ 8.00: ಚಪ್ಪರ ಶುದ್ಧೀಕರಣ
  • ರಾತ್ರಿ 9.00: ಶ್ರೀ ಬಬ್ಬುಸ್ವಾಮಿ ನೇಮೋತ್ಸವ
  • ರಾತ್ರಿ 12.30: ಶ್ರೀ ತನ್ನಿಮಾನಿಗ ದೇವಿಯ ನೇಮೋತ್ಸವ

16-05-2025 (ಶುಕ್ರವಾರ):

  • ಬೆಳಿಗ್ಗೆ 10.00: ಶ್ರೀ ಧೂಮಾವತಿ ಹಾಗೂ ಬಂಟ ದೈವಗಳ ನೇಮೋತ್ಸವ
  • ಮಧ್ಯಾಹ್ನ 2.30: ಶ್ರೀ ಗುಳಿಗದ್ವಯ ಮತ್ತು ರಾಹು ದೈವಗಳ ನೇಮೋತ್ಸವ
  • ಸಂಜೆ 5.00: ಶ್ರೀ ಕೊರಗಜ್ಜ ದೈವ ನೇಮೋತ್ಸವ
  • ರಾತ್ರಿ 7.00: ಭಂಡಾರವು ಶ್ರೀ ಬಬ್ಬುಸ್ವಾಮಿ ಕ್ಷೇತ್ರಕ್ಕೆ ಹಿಂತಿರುಗುವುದು

ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ಜರಗಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ದೈವ ದರ್ಶನ ಪಡೆದು ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸುವವರು:

ಅಧ್ಯಕ್ಷರು ಹಾಗೂ ಸರ್ವಸದಸ್ಯರು – ಜೀರ್ಣೋದ್ಧಾರ ಸಮಿತಿ
ಅಧ್ಯಕ್ಷರು ಹಾಗೂ ಸರ್ವಸದಸ್ಯರು – ಆಡಳಿತ ಸಮಿತಿ
ಗುರಿಕಾರರು, ಸಭೆಯ ಹತ್ತು ಸಮಸ್ತರು – ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಸ್ಥಾನ, ಕಂಪನಬೆಟ್ಟು

error: Content is protected !!