August 5, 2025
images

ಉಡುಪಿಯಲ್ಲಿ ದಾರುಣ ಘಟನೆ – ಕಾರು ಪಲ್ಟಿಯಾಗಿ 2 ವರ್ಷದ ಮಗು ಮೃತ, ಐವರು ಗಂಭೀರ ಗಾಯ!

ಉಡುಪಿಯ ಹಿನಕಲ್‌ ರಿಂಗ್‌ ರಸ್ತೆ ಜಂಕ್ಷನ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಪಲ್ಟಿಯಾಗಿ, 2 ವರ್ಷದ ಮಗು ಮೃತಪಟ್ಟಿದ್ದು, ಒಂದೇ ಕುಟುಂಬದ ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತ ಬಾಲಕಿ ಬೆಂಗಳೂರಿನ ನಿವಾಸಿ ನರೇಶ್ ಅವರ ಪುತ್ರಿ ಮೈಥಿಲಿ (2) ಎಂದು ಗುರುತಿಸಲಾಗಿದೆ. ಈ ದುರ್ಘಟನೆ ಸೋಮವಾರ ಸಂಜೆ ನಡೆದಿದೆ. ನರೇಶ್ ಕುಟುಂಬ ಸಮೇತ ಕೇರಳದ ವಯನಾಡಿಗೆ ಪ್ರವಾಸ ಹೋಗಿ, ಬೆಂಗಳೂರಿಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ.

ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾದ ಪರಿಣಾಮ, ಚಾಲಕ ನರೇಶ್, ಅವರ ಪತ್ನಿ ಸಂಧ್ಯಾ, ಭಾಮೈದ ಸಂದೇಶ್, ಡಾ. ಲಿಖೀತಾ ಹಾಗೂ ನರೇಶ್ ಅವರ ಅತ್ತೆ ಮನೋರಮಾ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಕುರಿತು ವಿವಿ ಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!